ಪಾಚ್ಕೊಳ್ಳಿ – ಅರಣ್ಯಾಧಿಕಾರಿಗಳಿಗೆ ನೇರ ಸವಾಲು ಹಾಕಿದ ನಟ, ರಾಜ್ಯಸಭಾ ಸಂಸದ ಜಗ್ಗೇಶ್​..!

ತಮ್ಮ ಬಳಿಯಲ್ಲಿದ್ದ ಹುಲಿ ಉಗುರಿನ ಲಾಕೆಟ್​ನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡ ಬೆನ್ನಲ್ಲೇ ನಟ ಮತ್ತು ರಾಜ್ಯಸಭಾ ಸಂಸದ ನವರಸ ನಾಯಕ ಜಗ್ಗೇಶ್​ ಅವರು ಪಾಚ್ಕೊಳ್ಳಿ ಎಂದು ಟ್ವೀಟ್​ ಮಾಡುವ ಮೂಲಕ ನೇರ ಸವಾಲು ಹಾಕಿದ್ದಾರೆ.

ಕಾನೂನು ದೊಡ್ಡದು ಅಧಿಕಾರಿಗಳು ಕೇಳಿದವಸ್ತು ಒಪ್ಪಿಸಲಾಗಿದೆ! ಅಮ್ಮ ನೀಡಿದ ಬಹಳ ಹಳೆಯ ಲಾಕೆಟ್ ಎಂದು ತಿಳಿಸಿರುವೆ! ಎಷ್ಟೋ ದೋಚುವ ಮನುಷ್ಯರು, ಕೊಲೆ ಪಾತಕರು, ದೇಶದ್ರೋಹಿಗಳು,ಸಮಾಜ ಘಾತಕರಿಗಿಂತ ನನ್ನತಾಯಿ ಕಾಣಿಕೆ ಬಗ್ಗೆ ನೆನ್ನೆಯಿಂದ ತಲೆಕೆಡಿಸಿಕೊಂಡ ದೇವರುಗಳಿಗೆ ಧನ್ಯವಾದತಲೆತಗ್ಗಿಸುವ ಯಾವ ಕೆಲಸ ಮಾಡಿಲ್ಲಾ ಮಾಡೋದಿಲ್ಲಾ!ಪಾಚ್ಕೊಳಿ.

ಒಂದು ವಿಷಯ ಅದ್ಭುತವಾಗಿ ಅರಿತೆ ಪ್ರೀತಿಸುವವರು 1000ಜನ ಇದ್ದರು ವಿಷಯವಿಲ್ಲದೆ ದ್ವೇಷ ಮಾಡುವ 100ಜನರು ಇದ್ದೆ ಇರುತ್ತಾರೆ! But remember one thing ಒಳ್ಳೆಗುಣನಡತೆ ಇದ್ದಾಗ ಕೊಲ್ಲೋಕೆ ಸಾವಿರಮಂದಿ ಬಂದರು ಕಾಯಲು ಒಬ್ಬ ಬರುತ್ತಾನೆ ಅವನೆ ದೇವರು ಬದುಕಲ್ಲಿ ಸಾಧ್ಯವಾದರೆ ಒಬ್ಬರಿಗೆ ಒಳ್ಳೆದುಮಾಡಿ ಅನ್ಯರಿಗೆ ಕೆಡುಕುಬಯಸಿ ಬಾಳಿದರೆ ನಾಶ!

ಎಂದು ಟ್ವೀಟಿಸಿದ್ದಾರೆ.

ಹುಲಿ ಉಗುರಿನ ಲಾಕೆಟ್​ ಧರಿಸಿದ ಆರೋಪದಡಿಯಲ್ಲಿ ಅಕ್ಟೋಬರ್​ 21ರಂದು ಬಿಗ್​ ಬಾಸ್​ ಶೋ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದ ಅರಣ್ಯಾಧಿಕಾರಿಗಳ ತಂಡ ಶೋ ನಡೆಯುತ್ತಿದ್ದ ಸ್ಥಳದಿಂದಲೇ ಸ್ಪರ್ಧಿ ವರ್ತೂರು ಸಂತೋಷ್​ ಅವರನ್ನು ಬಂಧಿಸಿದ್ದರು.

ಸಂತೋಷ್​ ಬಂಧನದ ಬಳಿಕ ನಟ ಜಗ್ಗೇಶ್​, ನಟ ದರ್ಶನ್​, ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಮತ್ತು ವಿನಯ್​ ಗುರೂಜಿ ವಿರುದ್ಧವೂ ಕ್ರಮಕ್ಕೆ ಆಗ್ರಹಿಸಿದ್ದರು.

LEAVE A REPLY

Please enter your comment!
Please enter your name here