ವಿಷ್ಣುವರ್ಧನ್ ಅಳಿಯ ಅನಿರುದ್ಧ್ 2 ವರ್ಷ ಬ್ಯಾನ್

Actor Anirudh

ಸಾಹಸಸಿಂಹ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್(​​​ Actor Anirudh )ರನ್ನು ಕಿರುತೆರೆಯಿಂದ 2 ವರ್ಷ ಬ್ಯಾನ್ ಮಾಡಲಾಗಿದೆ.

ಚಂದನವನದ ಕಿರುತೆರೆಯ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ನಟ ಅನಿರುದ್ಧ್( Actor Anirudh ) ಹಾಗೂ ನಿರ್ಮಾಪಕರ ನಡುವಿನ ಮನಸ್ತಾಪ ತಾರಕಕ್ಕೇರಿದೆ. ಆ ಹಿನ್ನೆಲೆಯಲ್ಲಿ ನಟ ಅನಿರುದ್ಧ್​​ರನ್ನು ಕಿರುತೆರೆಯಿಂದ ಬಾಯ್ಕಾಟ್ ಅಥವಾ ಬ್ಯಾನ್ ಮಾಡಲು ಕಿರುತೆರೆ ನಿರ್ಮಾಪಕ ಸಂಘ ನಿರ್ಧರಿಸಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ರಾವ್, ನಟ ಅನಿರುದ್ಧ್ ನಿರ್ದೇಶಕ ಮಧು ಉತ್ತಮ್​ಗೆ ಮೂರ್ಖ ಎಂದು ಕರೆದಿದ್ದಾರೆ. ಅಲ್ಲದೇ, ನಿರ್ದೇಶಕರನ್ನೇ ನಿಂದಿಸಿ ಸೆಟ್​ನಿಂದ ಹೊರ ಹೋಗಿದ್ದಾರೆ. ಆದ್ದರಿಂದ, ನಾವು ಅನಿರುದ್ಧ್ ಅವರನ್ನು 2 ವರ್ಷ ಬಾಯ್ಕಾಟ್ ಮಾಡಲು ನಿರ್ಧರಿಸಿದ್ದೇವೆ. ಆದರೆ, ಬ್ಯಾನ್ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಝೀ ಕುಟುಂಬ ಅವಾರ್ಡ್ಸ್: ಉತ್ತಮ ನಟ ಪ್ರಶಸ್ತಿ ಪಡೆದುಕೊಂಡ ಅನಿರುದ್ಧ್ ಮನದಾಳದ ಮಾತು

ಧಾರಾವಾಹಿಯ ದೃಶ್ಯ ಬದಲಾವಣೆ ಮಾಡುವಂತೆ ನಟ ಅನಿರುದ್ಧ್(Actor Anirudh) ನಿರ್ದೇಶಕರ ಜೊರೆ ಕಿರಿಕ್ ಮಾಡಿಕೊಂಡಿದ್ದಾರೆ. ಅನಿರುದ್ಧ್ ಹಲವು ಭಾರಿ ಜಗಳ ಆಡಿ ಶೂಟಿಂಗ್ ಸೆಟ್​ನಿಂದ ಹೊರನಡೆದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ, ಧಾರಾವಾಹಿ ತಂಡದ ಜೊತೆ ಜಗಳ ಮಾಡಿಕೊಂಡಿದ್ದರು. ಹಲವು ಭಾರಿ ಇಂತಹ ಘಟನೆ ನಡೆದಿದೆ. ಸಹಿಸಲು ಅಸಾಧ್ಯವಾದಾಗ ಧಾರಾವಾಹಿ ನಿರ್ಮಾಪಕ ಆರೋರು ಜಗದೀಶ್ ದೂರು ನೀಡಿದ್ದಾರೆ.

ಸಂಘದ ಬಂದ ದೂರಿನ ಆಧಾರದ ಮೇಲೆ ಸಭೆ ನಡೆಸಿ ಅನಿರುದ್ಧ್ ಅವರನ್ನು 2 ವರ್ಷ ಬಾಯ್ಕಾಟ್ ಮಾಡಲು ಎಲ್ಲರೂ ನಿರ್ಧರಿಸಿದ್ದೇವೆ ಎಂದು ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ  ಭಾಸ್ಕರ್ ಹೇಳಿದ್ದಾರೆ.

ಇದನ್ನೂ ಓದಿ : ಝೀ ಕುಟುಂಬ ಅವಾರ್ಡ್ಸ್: ಉತ್ತಮ ನಟ ಪ್ರಶಸ್ತಿ ಪಡೆದುಕೊಂಡ ಅನಿರುದ್ಧ್ ಮನದಾಳದ ಮಾತು

LEAVE A REPLY

Please enter your comment!
Please enter your name here