ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಿದೆ. ಆದರೆ ಅಧಿಕೃತ ವಿರೋಧ ಪಕ್ಷ ಬಿಜೆಪಿಗೆ ಇನ್ನೂ ವಿರೋಧ ಪಕ್ಷ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ.
ನಮ್ಮ ಸರ್ಕಾರ ರಚನೆಯಾಗಿ, ಗ್ಯಾರಂಟಿಗಳು ಜಾರಿಯಾಗಿ, ಅಧಿವೇಶನ ಶುರುವಾಗಿದೆ, ಬಜೆಟ್ ಮಂಡನೆಯೂ ಆರಂಭವಾಗಿದೆ. “ವಿರೋಧ ಪಕ್ಷದ ನಾಯಕ“ನ ಕುರ್ಚಿ ಮಾತ್ರ ಇನ್ನೂ ಖಾಲಿ ಇದೆ. ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯೂ ಇಲ್ಲ, ಗೌರವವೂ ಇಲ್ಲ ಎನ್ನುವುದಕ್ಕೆ ಈ ಚಿತ್ರವೇ ಸಾಕ್ಷಿ ನುಡಿಯುತ್ತಿದೆ. ಬಿಜೆಪಿ ವಿಪಕ್ಷ ನಾಯಕನ ಹುದ್ದೆಯನ್ನು ವ್ಯಾಪಾರಕ್ಕೆ ಇಟ್ಟಿರುವ ಅನುಮಾನವಿದೆ! ವ್ಯವಹಾರ ಇನ್ನೂ ಕುದುರಲಿಲ್ಲವೇ..?
ಎಂದು ವಿಧಾನಸೌಧದಲ್ಲಿ ವಿರೋಧಪಕ್ಷದ ನಾಯಕರ ಕೊಠಡಿಯಲ್ಲಿರುವ ಖಾಲಿ ಕುರ್ಚಿಯ ಚಿತ್ರವನ್ನು ಹಂಚಿಕೊಂಡು ಕಾಂಗ್ರೆಸ್ ಕಿಚಾಯಿಸಿದೆ.
ಮೇ 13ರಂದು ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, 54 ದಿನಗಳಾದರೂ ಇದುವರೆಗೆ ಬಿಜೆಪಿ ತನ್ನ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ.
ವಿರೋಧ ಪಕ್ಷದ ನಾಯಕರಿಲ್ಲದೆಯೇ ಬಜೆಟ್ ಅಧಿವೇಶನದ ಮೊದಲ ವಾರ ಮುಕ್ತಾಯವಾಗಿದೆ.
ADVERTISEMENT
ADVERTISEMENT