ಕರ್ನಾಟಕ ರಾಜ್ಯ ಪರೀಕ್ಷಾ ಪ್ರಾಧಿಕಾರ ವಿವಿಧ ವೃತ್ತಿಪರ ಕೋರ್ಸ್‌ಗಳ ‘ಸಾಮಾನ್ಯ ಪ್ರವೇಶ ಪರೀಕ್ಷೆ’ -2024ಕ್ಕೆ ದಿನಾಂಕ ನಿಗದಿ ಮಾಡಿದ್ದು ಇಂದು ವೇಳಾಪಟ್ಟಿ ಪ್ರಕಟಿಸಿದೆ. ಏಪ್ರಿಲ್ ನಿಂದ ಸಿಇಟಿ ಪರೀಕ್ಷೆಗಳು ಶುರುವಾಗಲಿದೆ.
ಇಂಜಿನಿಯರಿಂಗ್, ಫಾರ್ಮಸಿ, ಪಶುವೈದ್ಯಕೀಯ ವಿಜ್ಞಾನ ಮತ್ತು ಕೃಷಿಯಂತಹ ಕೋರ್ಸ್‌ಗಳಿಗೆ 2024 ರ ಏಪ್ರಿಲ್ 20 ಮತ್ತು 21ರಂದು ಪರೀಕ್ಷೆ ನಡೆಸಲು ಕರ್ನಾಟಕ ರಾಜ್ಯ ಪರೀಕ್ಷಾ ಪ್ರಾಧಿಕಾರ ತೀರ್ಮಾನಿಸಿದೆ.
ಜನವರಿ 10ರಿಂದ ಅರ್ಜಿಗಳ ನೋಂದಣಿ ಮತ್ತು ಭರ್ತಿ ಮಾಡಲಾಗುವುದು ಅಂತ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಮೊನ್ನೆಯಷ್ಟೇ ಮಾಹಿತಿ ನೀಡಿದರು. ಮೊದಲ ಬಾರಿಗೆ, ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಸೇರಿದಂತೆ ಎಲ್ಲಾ ವೃತ್ತಿಪರ ಕೋರ್ಸ್‌ಗಳಿಗೆ ಪರೀಕ್ಷೆ ಮತ್ತು ಕೌನ್ಸೆಲಿಂಗ್‌ಗೆ ಸಾಮಾನ್ಯ ಪ್ರವೇಶ ಪರೀಕ್ಷೆಯ ಅರ್ಜಿ ಸಲ್ಲಿಸಬೇಕಿದೆ.
ಕೋರ್ಸ್‌ಗಳನ್ನು ಸೇರಬಯಸುವ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡುವಾಗ ತಮ್ಮ ಸರಿಯಾದ ಆರ್‌ಡಿ ಸಂಖ್ಯೆಯನ್ನು ನಮೂದಿಸುವಂತೆ ಪ್ರಾಧಿಕಾರ ಸೂಚಿಸಿದೆ.ಅಭ್ಯರ್ಥಿಯು ಆರ್‌ಡಿ ಸಂಖ್ಯೆ ಇಲ್ಲದೆ ಜಾತಿ ಪ್ರಮಾಣಪತ್ರ ಹೊಂದಿದ್ದರೆ, ಅವರು ಆರ್‌ಡಿ ಸಂಖ್ಯೆ ಹೊಂದಿರುವ ಹೊಸ ಪ್ರಮಾಣಪತ್ರ ಪಡೆಯಬೇಕು ಅಥವಾ ಅವರು ಜಾತಿ ಮೀಸಲಾತಿಗೆ ಅರ್ಹತೆ ಸಿಗುವುದಿಲ್ಲ ಎಂದು ಕೆಇಎ ತಿಳಿಸಿದೆ.
ಬಿಪಿಟಿ, ಆರ್ಕಿಟೆಕ್ಚರ್, ಬಿಎಸ್‌ಸಿ ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ಬಿಪಿಒ ಕೋರ್ಸ್‌ಗಳಿಗೆ ಆಸಕ್ತ ವಿದ್ಯಾರ್ಥಿಗಳು ತಮ್ಮ ಅರ್ಜಿಗಳನ್ನು ಭರ್ತಿ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ keaugcet2024@gmail.com ಗೆ ಮೇಲ್ ಮಾಡುವಂತೆ ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಸಿಇಟಿ ಪರೀಕ್ಷೆಗಳಿಗಾಗಿ ಕಾತುರದಿಂದ ಕಾದಿದ್ದ ಅಭ್ಯರ್ಥಿಗಳಲ್ಲಿ ಇದೀಗ ಪರೀಕ್ಷಾ ದಿನಾಂಕ ಪ್ರಕಟವಾಗಿರೋದು ನಿರಾಳತೆ ತಂದಿದೆ. ತಮ್ಮಿಷ್ಟದಂತೆ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಸೇರಿದಂತೆ ಎಲ್ಲಾ ವೃತ್ತಿಪರ ಕೋರ್ಸ್‌ಗಳಿಗೆ ನಡೆಸುತ್ತಿರುವ ಸಿದ್ಧತೆಯನ್ನು ಮತ್ತಷ್ಟು ಚುರುಕುಗೊಳಿಸಲಿದ್ದಾರೆ.