ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘವು ಐಎಎಸ್, ಕೆಎಎಸ್, ಸೈನಿಕ ಹಾಗೂ ಅರೆ ಸೈನಿಕ ಬಲದ ಪೂರ್ವಭಾವಿ ಸಿದ್ಧತಾ ಉಚಿತ ತರಬೇತಿಗೆ ಕಲ್ಯಾಣ ಕರ್ನಾಟಕ ಭಾಗದ ಯುವಕ, ಯುವತಿಯರಿಂದ ಅರ್ಜಿ ಆಹ್ವಾನಿಸಿದೆ.
ಮಾಸಿಕ ರೂ. 4 ಸಾವಿರ ಭತ್ಯೆಯೊಂದಿಗೆ ಆರು ತಿಂಗಳ ಐಎಎಸ್, ಕೆಎಎಸ್ ತರಬೇತಿ ನೀಡಲಾಗುವುದು. ಸೈನಿಕ ಹಾಗೂ ಅರೆ ಸೈನಿಕ ಬಲದ ಪೂರ್ವಭಾವಿ ಸಿದ್ಧತಾ ತರಬೇತಿಯು ಊಟ, ವಸತಿ ಸಹಿತ ಮೂರು ತಿಂಗಳ ಅವಧಿಯದ್ದಾಗಿರಲಿದೆ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ತರಬೇತಿಗೆ ಅರ್ಜಿ ಸಲ್ಲಿಸಲು ಫೆಬ್ರುವರಿ 28 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ವೆಬ್ಸೈಟ್ www.kkhracs.com ನಲ್ಲಿ ಅರ್ಜಿ ಸಲ್ಲಿಸಬಹುದು. ತರಬೇತಿಗೆ ಸಂಬಂಧಿಸಿದ ಮಾಹಿತಿಯನ್ನೂ ಪಡೆಯಬಹುದಾಗಿದೆ.