ಪ್ರತಿ ತಿಂಗಳು 200 ಯುನಿಟ್​ ವಿದ್ಯುತ್​ ಉಚಿತ – ಕಾಂಗ್ರೆಸ್​ನಿಂದ ಮೊದಲ ಗ್ಯಾರಂಟಿ ಘೋಷಣೆ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ ತನ್ನ ಮೊದಲ ಭರವಸೆಯನ್ನು ಜನರ ಮುಂದಿಟ್ಟಿದೆ.
ಬೆಳಗಾವಿ ಜಿಲ್ಲೆಯಿಂದ ಇವತ್ತು ಆರಂಭವಾದ ಪ್ರಜಾಧ್ವನಿ ಯಾತ್ರೆಯ ಭಾಗವಾಗಿ ಮೊದಲ ಭರವಸೆಯನ್ನು ಪ್ರಕಟಿಸಿದೆ. ಈ ವರ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳು 200 ಯುನಿಟ್​ ಉಚಿತ ವಿದ್ಯುತ್​ ನೀಡುವ ಭರವಸೆ ನೀಡಿದೆ.

ಕಾಂಗ್ರೆಸ್ ಗ್ಯಾರಂಟಿ ನಂ.1 ‘ಗೃಹಜ್ಯೋತಿ’ ಯೋಜನೆ! ಬಿಜೆಪಿ ಸರ್ಕಾರದ ದುರಾಡಳಿತದಿಂದ, ಬೆಲೆಯೇರಿಕೆಯಿಂದ ದುಬಾರಿಯಾಗಿರುವ ಜನರ ಜೀವನ ನಿರ್ವಹಣೆಗೆ ಪರಿಹಾರವಾಗಿ ಕಾಂಗ್ರೆಸ್ ಪಕ್ಷವು ಮೊದಲ ಭರವಸೆಯನ್ನು ಇಂದು ಘೋಷಿಸುತ್ತಿದೆ. ಪ್ರತಿ ಮನೆಗೆ, ಪ್ರತಿ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ – ಇದು ಕಾಂಗ್ರೆಸ್ ಭರವಸೆ.

ಕತ್ತಲೆಯಿಂದ ಬೆಳಕಿನೆಡೆಗೆ ಸಾಗಲಿ ಕರ್ನಾಟಕ, ಇದು ಕಾಂಗ್ರೆಸ್‌ನ ಸದಾಶಯ. 2022ರ ಒಂದೇ ವರ್ಷದ ಅವಧಿಯಲ್ಲಿ ಮೂರು ಬಾರಿ ವಿದ್ಯುತ್ ದರ ಏರಿಕೆ ಮಾಡಿದ ಬಿಜೆಪಿ ಸರ್ಕಾರ 4 ವರ್ಷದಲ್ಲಿ 8ಕ್ಕೂ ಹೆಚ್ಚು ಬಾರಿ ದರ ಏರಿಸಿದೆ. ಮುಂದಿನ ಕಾಂಗ್ರೆಸ್ ಸರ್ಕಾರ ಜನರ ಬದುಕಿಗೆ ಬೆಳಕಾಗಲಿದೆ.

ಕೋವಿಡ್, ಲಾಕ್ಡೌನ್, ನೋಟ್ ಬ್ಯಾನ್, GST, ಬೆಲೆ ಏರಿಕೆಯಂತಹ ಅಮಾನವೀಯ ಕ್ರಮಗಳಿಂದ ಜನರ ಬದುಕು ಭಾರವಾಗಿದೆ. ಜನರ ದುಡಿಮೆ ಹಸಿವು ನೀಗಿಸಲು ಸಾಲದಾಗಿರುವಾಗ 200 ಯೂನಿಟ್ ಉಚಿತ ವಿದ್ಯುತ್ತಿನ ಗೃಹಜ್ಯೋತಿ ಘೋಷಣೆಯು ಜನಸಾಮಾನ್ಯರ ಬದುಕಿನಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗಲಿದೆ. ಕಾಂಗ್ರೆಸ್ ಎಂದೂ ಜನಪರ.

2019ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 8 ಬಾರಿ ವಿದ್ಯುತ್​ ಬೆಲೆ ಏರಿಕೆ ಮಾಡಿದೆ. ಕಳೆದ ವರ್ಷವೊಂದರಲ್ಲೇ ಮೂರು ಬಾರಿ ವಿದ್ಯುತ್​ ಬೆಲೆ ಏರಿಕೆ ಆಗಿದೆ.
ವಿದ್ಯುತ್​ ದರ ಏರಿಕೆ ಈ ಬಾರಿ ಚುನಾವಣಾ ವಿಷಯ ಆಗಿರುವ ಕಾರಣ ಕಾಂಗ್ರೆಸ್​ ತನ್ನ ಪ್ರಜಾಧ್ವನಿ ಯಾತ್ರೆಯ ಮೊದಲ ದಿನವೇ ಉಚಿತ ವಿದ್ಯುತ್​ನ ಭರವಸೆ ನೀಡಿದೆ.
ಕರ್ನಾಟಕದಲ್ಲಿ ಮನೆಗಳಲ್ಲಿ ಸರಾಸರಿ ವಿದ್ಯುತ್​ ಬಳಕೆ 50 ಯುನಿಟ್​ನಿಂದ 100 ಯುನಿಟ್​ವರೆಗೆ ಇದೆ.
ಬಿಜೆಪಿ, ಜೆಡಿಎಸ್​ ಮತ್ತು ಆಮ್​ ಆದ್ಮಿ ಪಕ್ಷಕ್ಕೂ ಮೊದಲೇ ಕಾಂಗ್ರೆಸ್​ ಉಚಿತ ವಿದ್ಯುತ್​ ಘೋಷಣೆ ಮಾಡುವ ಮೂಲಕ ಮತ ಸೆಳೆಯುವ ಪ್ರಯತ್ನ ಮಾಡಿದೆ.

LEAVE A REPLY

Please enter your comment!
Please enter your name here