2 ಸಾವಿರ ರೂಪಾಯಿ ನೋಟು ನಿಷೇಧ – ಇಲ್ಲಿದೆ ಆ 7 ಲೆಕ್ಕ..!

ಸೆಪ್ಟೆಂಬರ್​ 30ರಿಂದ 2 ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳ ನಿಷೇಧವಾಗಿದೆ. ಚಲಾವಣೆಯಲ್ಲಿರುವ 2 ಸಾವಿರ ರೂಪಾಯಿ ನೋಟಿನ ಬಗ್ಗೆ ಲೆಕ್ಕ ಇಲ್ಲಿದೆ.

ಲೆಕ್ಕ 1:

ಆರ್​ಬಿಐ ನೀಡಿರುವ ಮಾಹಿತಿ ಪ್ರಕಾರ ಮಾರ್ಚ್​ 31, 2023 ಅಂದರೆ ಕಳೆದ 2 ತಿಂಗಳವರೆಗೆ ನಗದು ರೂಪದಲ್ಲಿ ಚಲಾವಣೆಯಲ್ಲಿದ್ದ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಮೌಲ್ಯ – 3 ಲಕ್ಷದ 62 ಸಾವಿರ ಕೋಟಿ ರೂಪಾಯಿ.

ಲೆಕ್ಕ 2:

ಸೆಪ್ಟೆಂಬರ್​ 30ರವರೆಗೆ ಒಬ್ಬರಿಗೆ 2 ಸಾವಿರ ರೂಪಾಯಿ ಮುಖಬೆಲೆಯ 20 ಸಾವಿರ ರೂಪಾಯಿ ಮೊತ್ತವನ್ನಷ್ಟೇ ಬ್ಯಾಂಕ್​ಗಳಲ್ಲಿ ವಿನಿಮಯ ಮಾಡಿ ಬೇರೆ ನೋಟುಗಳನ್ನು ಪಡೆಯಲು ಅವಕಾಶ ಇದೆ.

ಲೆಕ್ಕ 3:

ಅಂದರೆ 18 ಕೋಟಿಯಷ್ಟು ಮಂದಿ 2 ಸಾವಿರ ರೂಪಾಯಿ ಮುಖಬೆಲೆಯ 20 ಸಾವಿರ ರೂಪಾಯಿ ಮೊತ್ತವನ್ನು ಬ್ಯಾಂಕ್​ಗಳಲ್ಲಿ ಬೇರೆ ನೋಟುಗಳಿಗೆ ವಿನಿಮಯ ಮಾಡಬೇಕಾಗುತ್ತದೆ..

ಲೆಕ್ಕ 4:

ನೋಟುಗಳ ವಿನಿಮಯಕ್ಕೆ ಸೆಪ್ಟೆಂಬರ್​ 30ರವರೆಗೆ ಸಮಯ ಕೊಟ್ಟಿರುವುದರಿಂದ ಪ್ರತಿ ದಿನ ಸರಾಸರಿ 14 ಲಕ್ಷ ಬಾರಿ ನೋಟುಗಳ ವಿನಿಮಯ ಆಗಬೇಕು.

ಲೆಕ್ಕ 5:

2 ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಬೇರೆ ನೋಟುಗಳಿಗೆ ವಿನಿಮಯ ಮಾಡಲಷ್ಟೇ 20 ಸಾವಿರ ರೂಪಾಯಿಯಷ್ಟು ಮಿತಿ ಇದೆ. ಆದರೆ ಬ್ಯಾಂಕ್​ನಲ್ಲಿ ಠೇವಣಿ ರೂಪದಲ್ಲಿ ಜಮೆ ಮಾಡಲು ಮಿತಿ ಇಲ್ಲ. 2 ಸಾವಿರ ರೂಪಾಯಿ ಮುಖಬೆಲೆಯ ಎಷ್ಟು ಮೊತ್ತದ ನೋಟನ್ನಾದರೂ ಸೆಪ್ಟೆಂಬರ್​ 30ರವರೆಗೆ ಜಮೆ ಮಾಡಬಹುದು.

ಲೆಕ್ಕ 6:

ಮಾರ್ಚ್​ 31, 2017ಕ್ಕೆ 2 ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳ ಮುದ್ರಣ ನಿಂತಿದೆ.

ಲೆಕ್ಕ 7:

ನವೆಂಬರ್​ 2016ರಲ್ಲಿ ಪರಿಚಯಿಸಲಾದ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಜೀವಿತಾವಧಿ 4-5 ವರ್ಷ. ಹೀಗಾಗಿಯೇ ಚಲಾವಣೆಯಲ್ಲಿದ್ದ 2 ಸಾವಿರ ರೂಪಾಯಿ ಮುಖಬೆಲೆಯ ನೋಟಿನ ಗುಣಮಟ್ಟ ಹಾಳಾಗಿರುವ ಸ್ವಚ್ಛ ನೋಟು ಯೋಜನೆಯಡಿ ನೋಟು ವಾಪಸ್​ ಪಡೆಯಲಾಗಿದೆ.