ನಟ ಶರಣ್ ಅಭಿನಯದ ಬಹುನಿರೀಕ್ಷಿತ ‘ಅವತಾರ ಪುರುಷ’ ಚಿತ್ರದ ಬಿಡುಗಡೆ ದಿನಾಂಕವನ್ನು ಇಂದು ಚಿತ್ರತಂಡ ಬಿಡುಗಡೆ ಮಾಡಿದೆ.
ಅವತಾರ ಪುರುಷ ಚಿತ್ರವನ್ನು ಮೇ 6 ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಚಿತ್ರದ ನಿರ್ಮಾಪಕ ಪುಚ್ಕರ್ ಮಲ್ಲಿಕಾರ್ಜುನಯ್ಯ ಟ್ವಿಟ್ ಮಾಡಿ ತಿಳಿಸಿದ್ದಾರೆ.
ಈ ಹಿಂದೆ ಕೊರೋನಾ ಕಾರಣ ಹಾಗೂ ಹಲವು ದೊಡ್ಡ ಚಿತ್ರಗಳ ಪೈಪೋಟಿಯ ಕಾರಣದಿಂದಾಗಿ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಾ ಬರಲಾಗಿತ್ತು.
ಸುನಿಯವರ ನಿರ್ದೇಶನದ ಅವತಾರ ಪುರುಷ ಚಿತ್ರದಲ್ಲಿ ನಟ ಶರಣ್ ಅವರು ಅವರು ಈ ಚಿತ್ರದ ನಾಯಕ ನಟನಾಗಿದ್ದು, ಆಶಿಕಾ ರಂಗನಾಥ್ ಇವರಿಗೆ ಜೊತೆಯಾಗಿದ್ದಾರೆ. ಖ್ಯಾತ ನಟರಾದ ಶ್ರೀನಗರ ಕಿಟ್ಟಿ, ಸಾಯಿ ಕುಮಾರ್ , ಸುಧಾರಾಣಿಯವರು ಈ ಚಿತ್ರದಲ್ಲಿ ನಟಿಸಿದ್ದಾರೆ.