ಭಾರತದ ಬಹು ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಷನ್ ‘ವಾಟ್ಸ್ ಆ್ಯಪ್’ ತನ್ನ ಬಳಕೆದಾರರಿಗೆ ಮತ್ತೊಂದು ನೂತನ ಸೌಲಭ್ಯ (ಫೀಚರ್) ಒದಗಿಸಿದೆ. ವಾಟ್ಸ್ ಆ್ಯಪ್ ಗುಂಪುಗಳ ಆ್ಯಡ್ಮಿನ್ಗೆ ಗುಂಪನ್ನು ನಿಯಂತ್ರಿಸಲು ಹೆಚ್ಚಿನ ಅಧಿಕಾರವನ್ನು ನೀಡಿದೆ.
ವಾಟ್ಸ್ಆ್ಯಪ್ನ ಅಪ್ಡೇಟ್ಗಳು, ಪ್ರಯೋಗಗಳ ಕುರಿತು ಮಾಹಿತಿ ನೀಡುವ ಡಬ್ಲ್ಯುಎಬೀಟಾಇನ್ಫೊ (WABetaInfo) ಪ್ರಕಾರ, ವಾಟ್ಸ್ಆ್ಯಪ್ ಗುಂಪಿನಲ್ಲಿರುವ ಯಾವುದೇ ಸದಸ್ಯ ಗುಂಪಿಗೆ ಕಳುಹಿಸುವ ಸಂದೇಶಗಳ ಮೇಲೆ ಅಡ್ಮಿನ್ ನಿಯಂತ್ರಣ ಸಾಧಿಸಬಹುದಾಗುತ್ತದೆ. ಅಂದರೆ, ಗುಂಪಿಗೆ ಬರುವ ಸಂದೇಶವನ್ನು ಉಳಿಸಿಕೊಳ್ಳಬೇಕೆ ಅಥವಾ ತೆಗೆದು ಹಾಕಬೇಕೆ ಎಂಬುದನ್ನು ಅಡ್ಮಿನ್ ನಿರ್ಧರಿಸಿ ಕ್ರಮ ತೆಗೆದುಕೊಳ್ಳಬಹುದು. ಅಡ್ಮಿನ್ ನಿರ್ದಿಷ್ಟ ಸಂದೇಶವನ್ನು ತೆಗೆದು ಹಾಕಿದರೆ, ಈ ಸಂದೇಶವು ಅಡ್ಮಿನ್ರಿಂದ ಅಳಿಸಿ ಹಾಕಲ್ಪಟ್ಟಿದೆ ಎಂದು ಕಾಣಿಸಿಕೊಳ್ಳುತ್ತದೆ.
ವಾಟ್ಸ್ಆ್ಯಪ್ ಬೀಟಾ ಆವೃತ್ತಿಯ ಮುಂದಿನ ಅಪ್ಡೇಟ್ನಲ್ಲಿ ಈ ಆಯ್ಕೆಯು ಸೇರ್ಪಡೆಯಾಗಲಿದೆ. ಮುಂದೆ ಗುಂಪಿನ ಅಡ್ಮಿನ್, ಗುಂಪಿನ ಯಾವುದೇ ಸದಸ್ಯರ ಸಂದೇಶವನ್ನು ಅಳಿಸಿ ಹಾಕುವುದು ಸಾಧ್ಯವಾಗಲಿದೆ. ಈ ಕುರಿತು ಡಬ್ಲ್ಯುಎಬೀಟಾಇನ್ಫೊ ಟ್ವೀಟಿಸಿದೆ. ವಾಟ್ಸ್ ಆ್ಯಪ್ ನ ಈ ನೂತನ ಫೀಚರ್ನಿಂದ ಗ್ರೂಪ್ನ ಆ್ಯಡ್ಮಿನ್ಗೆ, ಗ್ರೂಪ್ನ ಇತರೆ ಸದಸ್ಯರು ಹಾಕುವ ಅನಗತ್ಯ ಸಂದೇಶಗಳನ್ನು ನಿಯಂತ್ರಿಸಬಹುದು.
ಇದರೊಂದಿಗೆ ವಾಟ್ಸ್ಆ್ಯಪ್ ತನ್ನ ಡೆಸ್ಕ್ಟಾಪ್ ಆ್ಯಪ್ ಮತ್ತು ವೆಬ್ ಆವೃತ್ತಿಗೆ ಎರಡು ಹಂತಗಳ ಪರಿಶೀಲನಾ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುತ್ತಿದೆ. ವಾಟ್ಸ್ಆ್ಯಪ್ಗೆ ಮೊಬೈಲ್ ಸಂಖ್ಯೆ ನೋಂದಾಯಿಸುವಾಗ ವೈಯಕ್ತಿಕವಾಗಿ ನಿಗದಿ ಪಡಿಸಿಕೊಂಡಿರುವ ಪಿನ್ ಸಂಖ್ಯೆ ನಮೂದಿಸಬೇಕಾಗುತ್ತದೆ.
If you are a group admin, you will be able to delete any message for everyone in your groups, in a future update of WhatsApp beta for Android.
A good moderation, finally. #WhatsApp pic.twitter.com/Gxw1AANg7M
— WABetaInfo (@WABetaInfo) January 26, 2022