ಮಾಲಿವುಡ್‌ಗೆ ಎಂಟ್ರಿ ಕೊಟ್ಟ ರಾಜ್‌ ಬಿ ಶೆಟ್ಟಿ

ಚಂದನವನದಲ್ಲಿ ತನ್ನ ನಟನೆ ಹಾಗೂ ನಿರ್ದೇಶನದ ಮೂಲಕ ಗಮನ ಸೆಳೆದಿರುವ ಕರಾವಳಿಯ ಹುಡುಗ ರಾಜ್.ಬಿ‌.ಶೆಟ್ಟಿ ‘ಗರುಡ ಗಮನ ವೃಷಭ ವಾಹನ’ ನಿಂದ ಸೌಂಡ್ ಮಾಡಿದ್ದರು.
ಮೋಹಕ ತಾರೆ ರಮ್ಯಾ ಅವರ ಆ್ಯಪಲ್ ಬಾಕ್ಸ್ ಪ್ರೊಡಕ್ಷನ್ ನಲ್ಲಿ ಬರುತ್ತಿರುವ ‘ಸ್ವಾತಿ ಮುತ್ತಿನ ಮಳೆ‌ ಹನಿಯೇ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

ಈ ಸುದ್ದಿ ಪ್ರಚಲಿತದಲ್ಲಿರುವಾಗಲೇ ರಾಜ್ ಬಿ ಶೆಟ್ಟಿ ಅವರು ಮತ್ತೊಂದು ದೊಡ್ಡ ಅನೌನ್ಸ್ ಮೆಂಟ್ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ಮಾಲಿವುಡ್ ಎಂಟ್ರಿಯಾಗಲಿದ್ದಾರೆ.

https://www.instagram.com/p/CkaIewwhz1s/?utm_source=ig_embed&ig_rid=1f31efd8-8ddc-4e26-81ea-1e4a824a7d05

‘ರುಧಿರಂ’ ಚಿತ್ರದ ಮೂಲಕ ಮಲಯಾಳಂ ಸಿನಿಮಾ ರಂಗಕ್ಕೆ ರಾಜ್ ಬಿ ಶೆಟ್ಟಿ ಪಾದಾರ್ಪಣೆ ಮಾಡಲಿದ್ದಾರೆ. ವರದಿಯ ಪ್ರಕಾರ ಈ ಸಿನಿಮಾ ನಾಲ್ಕು ಭಾಷೆಗಳಲ್ಲಿ ಬರಲಿದೆ.

ಈ ಚಿತ್ರವನ್ನು ಜಿಶೊ ಲಾನ್ ಆಂಥೋನಿ ನಿರ್ದೇಶನ ಮಾಡಲಿದ್ದಾರೆ. ರಾಜ್.ಬಿ.ಶೆಟ್ಟಿ ಅವರೊಂದಿಗೆ ಅಪರ್ಣಾ ಬಾಲಮುರಳಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

2023 ಕ್ಕೆ ಸಿನಿಮಾ ತೆರೆಗೆ ಬರಲಿದೆ.