ಮಂಗಳೂರು: KSRTCಯಿಂದ ವಿಶೇಷ ದೀಪಾವಳಿ ಪ್ಯಾಕೇಜ್

KSRTC
KSRTC

ಮಂಗಳೂರು: KSRTC ಮಂಗಳೂರು ವಿಭಾಗದ ವತಿಯಿಂದ ದ.ಕ ಹಾಗೂ ನೆರೆಯ ಉಡುಪಿ – ಕೊಡಗು ಜಿಲ್ಲೆಯ ವಿವಿಧ ಪ್ರೇಕ್ಷಣೀಯ ಹಾಗೂ ಧಾರ್ಮಿಕ ಸ್ಥಳಗಳಿಗೆ ದೀಪಾವಳಿ ವಿಶೇಷ ಟೂರ್ ಪ್ಯಾಕೇಜ್ ಆಯೋಜಿಸಲಾಗಿದೆ.

ಈ ವಿಶೇಷ ಪ್ಯಾಕೇಜ್ ಇಂದಿನಿಂದ 31-10-2022 ದ ವರೆಗೆ ಇದ್ದು, ದಿನಾಂಕ 25-10-2022 ರಂದು ಸೂರ್ಯಗ್ರಹಣ ಇರುವ ಕಾರಣ ಆ ದಿನ ಹೊರತುಪಡಿಸಿ ಉಳಿದ 10 ದಿನಗಳ ಕಾಲ ವಿಶೇಷ ಟೂರ್ ಪ್ಯಾಕೇಜ್ ಏರ್ಪಡಿಸಲಾಗಿದೆ.

ಮುಂಗಡ ಟಿಕೆಟ್ ಬುಕ್ಕಿಂಗ್ ಅವಕಾಶವು KSRTC ಯ ಅಧಿಕೃತ ವೆಬ್ಸೈಟ್ www.ksrtc.in ನಲ್ಲಿ ಒದಗಿಸಲಾಗಿದೆ. ಸದರಿ ಪ್ಯಾಕೇಜ್ ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಮಂಗಳೂರಿನಿಂದ ಹೊರಡಲಿದ್ದು, ಊಟ-ಉಪಚಾರ ಹೊರತುಪಡಿಸಿ, ದರ ನಿಗದಿಪಡಿಸಲಾಗಿದೆ.