ಮಂಗಳೂರು: ಕಸಬ ಬೆಂಗ್ರೆಯಲ್ಲಿ ಹೊತ್ತಿ ಉರಿದ ಮೂರು ದೋಣಿಗಳು…!

ಮಂಗಳೂರು: ಬೆಂಗರೆ ಪ್ರದೇಶದಲ್ಲಿ ಸಮುದ್ರದ ದಡದ ಬಳಿ ನಿಲ್ಲಿಸಲಾಗಿದ್ದ ಎರಡು ಬೋಟ್‌ಗಳು ಬೆಂಕಿಗಾಹುತಿಯಾದ ಘಟನೆ ಇಂದು ನಡೆದಿದೆ.

ಕಸಬಾ ಬೆಂಗ್ರೆಯ ಬಳಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಇಲ್ಲಿ ಮೂರು ಬೋಟ್‌ಗಳನ್ನು ನಿಲ್ಲಿಸಲಾಗಿದ್ದು, ಈ ಪೈಕಿ ಎರಡು ಬೋಟ್‌ಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಬೋಟ್‌ಗಳು ಸಂಪೂರ್ಣವಾಗಿ ಸುಟ್ಟು ಹೋಗಿದೆ.

ಸ್ಥಳೀಯರೊಬ್ಬರ ಮಾಹಿತಿ ಪ್ರಕಾರ ಡಿಯೂ ಡಮನ್‌ನಂತಹ ದ್ವೀಪ ಪ್ರದೇಶಕ್ಕೆ ಸರಕು ಸಾಮಾಗ್ರಿಗಳನ್ನು ಕೊಂಡೊಯ್ಯಲು ಈ ಬೋಟ್‌ಗಳನ್ನು ಬಳಸಲಾಗುತ್ತಿತ್ತು. ಇದೀಗ ರಿಪೇರಿಗೆಂದು ನಿಲ್ಲಿಸಲಾಗಿತ್ತು ಎಂದು ಹೇಳಿದ್ದಾರೆ.

ಬೋಟ್‌ಗಳು ಬೆಂಕಿಗಾಹುತಿಯಾದ್ದರಿಂದ ಇಡೀ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿತ್ತು. ಅಗ್ನಿಶಾಮಕ ದಳ ಕೂಡಲೇ ಸ್ಥಳಕ್ಕಾಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಬೋಟ್‌ಗಳಿಗೆ ಬೆಂಕಿ ಹತ್ತಿಕೊಳ್ಳಲು ಕಾರಣವೇನೆಂದು ಗೊತ್ತಾಗಿಲ್ಲ. ಇವು ಲಕ್ಷದ್ವೀಪದ ಉದ್ಯಮಿಗಳಿಗೆ ಸೇರಿದ ಬೋಟ್‌ಗಳು ಎಂದು ತಿಳಿದು ಬಂದಿದೆ.