ಮಂಗಳೂರು: ಅಂ.ರಾ. ವಿಮಾನ ನಿಲ್ದಾಣಕ್ಕೆ ಬಸ್ ಸೇವೆ ಪ್ರಾರಂಭ; ಪ್ರಯಾಣ ದರ ನಿಗದಿ

ಮಂಗಳೂರು: ನಗರದಿಂದ ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಸಾರ್ವಜನಿಕ ಪ್ರಯಾಣಿಕರ ಬೇಡಿಕೆ ಮೇರೆಗೆ ಮಂಗಳೂರು ರೈಲು ನಿಲ್ದಾಣದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರ್ಯಾಚರಣೆಯಾಗುವ ನಗರ ವೋಲ್ವೋ ಸಾರಿಗೆಗಳ ಮಧ್ಯಂತರ ಸ್ಥಳಗಳ ಪ್ರಯಾಣದರ ನಿಗದಿ ಪಡಿಸಿದೆ.

ವಿವರ ಇಂತಿದೆ:
ಮಂಗಳೂರು ರೈಲು ನಿಲ್ದಾಣದಿಂದ – ಜ್ಯೋತಿ 20ರೂ., ಕೆಎಸ್ ಆರ್ ಟಿಸಿ ಬಿಜೈ 25ರೂ., ಕುಂಟಿಕಾನ 30ರೂ., ಕೊಂಚಾಡಿ 35ರೂ., ಕಾವೂರು 40ರೂ., ಮರವೂರು 60ರೂ., ಕರಂಬಾರು 70ರೂ.ಗಳು.

ಜ್ಯೋತಿಯಿಂದ – ಕೆಎಸ್ ಆರ್ ಟಿಸಿ ಬಿಜೈ 20ರೂ., ಕುಂಟಿಕಾನ 25 ರೂ., ಕೊಂಚಾಡಿ 30ರೂ., ಕಾವೂರು 35 ರೂ., ಮರವೂರು 50 ರೂ., ಕರಂಬಾರು 60 ರೂ.ಗಳು.

ಕೆಎಸ್ಆರ್ಟಿಸಿ ಬಿಜೈಯಿಂದ – ಕುಂಟಿಕಾನ 20ರೂ., ಕೊಂಚಾಡಿ 25ರೂ., ಕಾವೂರು 30 ರೂ., ಮರವೂರು 40 ರೂ., ಕರಂಬಾರು 50ರೂ.ಗಳು.

ಕುಂಟಿಕಾನದಿಂದ – ಕೊಂಚಾಡಿ 20ರೂ., ಕಾವೂರು 25ರೂ., ಮರವೂರು 30ರೂ., ಕರಂಬಾರು 40ರೂ.ಗಳು.
ಕೊಂಚಾಡಿಯಿಂದ – ಕಾವೂರು 20ರೂ., ಮರವೂರು 30ರೂ., ಕರಂಬಾರು 40ರೂ.

ಕಾವೂರುನಿಂದ – ಮರವೂರು 20ರೂ., ಕರಂಬಾರು 30ರೂ. ಪ್ರಯಾಣದರ ನಿಗದಿಪಡಿಸಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರಿನ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.