ಹಾಡಹಗಲೇ ಬ್ಯಾಂಕ್ ಗೆ ನುಗ್ಗಿದ ದರೋಡೆಕೋರರು 18 ಕೋಟಿ ರೂಪಾಯಿ ಹಣ ದೋಚಿ ಪರಾರಿಯಾದ ಘಟನೆ ಮಣಿಪುರದಲ್ಲಿ ನಡೆದಿದೆ.
ಇಲ್ಲಿನ ಉಖ್ರಲ್ ಜಿಲ್ಲೆಯಲ್ಲಿ ನ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಗನ್ ಮತ್ತಿತರ ಮಾರಕಾಸ್ತ್ರಗಳನ್ನು ಹಿಡಿದ ದರೋಡೆಕೋರರು ಬ್ಯಾಂಕ್ ಸಿಬ್ಬಂದಿಯನ್ನು ಶೌಚಾಲಯದಲ್ಲಿ ಕೂಡಿಹಾಕಿ ಈ ಕೃತ್ಯವೆಸಗಿದ್ದಾರೆ. ಬ್ಯಾಂಕ್ ನ ಹಿರಿಯ ಸಿಬ್ಬಂದಿಯೊಬ್ಬರ ಕುತ್ತಿಗೆ ಮೇಲೆ ಗನ್ ಇಟ್ಟು ಬೆದರಿಸಿ ಅವರಿಂದಲೇ ಲಾಕರ್ ತೆರೆಸಿ ಅದರಲ್ಲಿದ್ದ 18.80 ಕೋಟಿ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.
ಈ ಕುರಿತು ಉಖ್ರಲ್ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿರೋ ಪೊಲೀಸರು ಈಗಾಗಲೇ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ದರೋಡೆಕೋರರನ್ನು ಪತ್ತೆಹಚ್ಚುವಲ್ಲಿ ಕಾರ್ಯಪ್ರವೃತರಾಗಿದ್ದಾರೆ.