ಬಿಹಾರ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥರು ಕಳೆದ ವರ್ಷ ನನ್ನ ಮೇಲೆ ದೆಹಲಿಯಲ್ಲಿ ಬಾಕಿ ಇರುವ ಬಿಲ್ ಪಾವತಿಯ ಬಗ್ಗೆ ಕೇಳಲು ಹೋದಾಗ ಅತ್ಯಾಚಾರಕ್ಕೆ ಯತ್ನಿಸಿದ್ದರು ಎಂದು ಜಾಹೀರಾತು ವಿಭಾಗದ ನಿರ್ದೇಶಕಿ ಆರೋಪಿಸಿದ್ದಾರೆ.
ಸಂತ್ರಸ್ಥ ಮಹಿಳೆ ಸೋಮವಾರ ದೆಹಲಿಯ ಸಂಸತ್ ದಾರಿಯ ಪೊಲೀಸ್ ಠಾಣೆಯಲ್ಲಿ ರಾಕೇಶ್ ತಿವಾರಿಯವರ ವಿರುದ್ಧ ಅತ್ಯಾಚಾರ ಹಾಗೂ ಮಾನನಷ್ಠದ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರ ಪ್ರಕಾರ ಕಳೆದ ವರ್ಷದ ಜುಲೈನಲ್ಲಿ ಈ ಪ್ರಕರಣ ನಡೆದಿದೆ. ಸಂತ್ರಸ್ಥ ಮಹಿಳೆ ಭಾನುವಾರ ದೂರು ನೀಡಿದ್ದು, ಸೋಮವಾರ ಎಫ್ಐಆರ್ ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ.
ಗುರಗಾಂವ್ನಲ್ಲಿ ವಾಸಿಸುವ ಮಹಿಳೆ ನೀಡಿರುವ ದೂರಿನಲ್ಲಿ, ಕಳೆದ ಮಾರ್ಚ್ನಲ್ಲಿ ಆಯೋಜಿಸಿದ್ದ ಟೂರ್ನ್ಮೆಂಟ್ನಲ್ಲಿ ನನ್ನ ಸಂಸ್ಥೆ ಜಾಹೀರಾತು ಜವಾಬ್ದಾರಿಯನ್ನು ಹೊತ್ತುಕೊಂಡಿತ್ತು. ಈ ಬಗ್ಗೆ ಬಾಕಿ ಬಿಲ್ ಪಾವತಿಗಾಗಿ ಅವರನ್ನು ಭೇಟಿಯಾಗಿದ್ದೆ ಈ ವೇಳೆ ಅವರಿಂದ ಅತ್ಯಾಚಾರದ ಯತ್ನ ನಡೆಯಿತು ಎಂದು ಆರೋಪಿಸಿದ್ದಾರೆ.
ಕಳೆದ ವರ್ಷದ ಜುಲೈ 12 ರಂದು ರಾಕೇಶ್ ತಿವಾರಿ ದೆಹಲಿಯಲ್ಲಿದ್ದರು. ಈ ವೇಳೆ ಬಾಕಿ ಬಿಲ್ ಪಾವತಿಗಾಗಿ ಅವರನ್ನು ಭೇಟಿ ಮಾಡಲು ಸಂಪರ್ಕಿಸಿದ್ದೆ. ಅವರು ನನ್ನನ್ನು ಫೈವ್ ಸ್ಟಾರ್ ಹೋಟೆಲ್ಗೆ ಬರಲು ಹೇಳಿದ್ದರು. ಈ ವೇಳೆ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ.
ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇನ್ನು, ರಾಕೇಶ್ ತಿವಾರಿಯವರು ದೇಶದ ಪ್ರಮುಖ ಕ್ರಿಕೆಟ್ ಸಂಸ್ಥೆಯವರೊಂದಿಗೆ ಹತ್ತಿರದ ಸಂಪರ್ಕದಲ್ಲಿದ್ದಾರೆ ಹಾಗೆಯೇ ಪ್ರಮುಖ ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದಾರೆ.