‘ಬಿಗ್ ಬಾಸ್ ಕನ್ನಡ 9′: ನಾಳೆ ಸುದೀಪ್ ಪಂಚಾಯಿತಿ ಇರಲ್ಲ..!; ಕಾರಣವೇನು ಗೋತ್ತಾ..?

‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮ ಶುರುವಾಗಿ ಮೂರು ವಾರಗಳು ಕಳೆದಿದ್ದು, ಮೂರೂ ವಾರಾಂತ್ಯಗಳಲ್ಲಿ ಕಿಚ್ಚ ಸುದೀಪ್ ಪಂಚಾಯತಿ ನಡೆಸಿದ್ದಾರೆ.

ಆದರೆ ಈ ಬಾರಿ ಬಿಗ್ ಶೋ ಬಗ್ಗೆ ಗಾಸಿಪ್ ಒಂದು ಹರಿದಾಡುತ್ತಿದ್ದು, ಈ ವಾರದ ಬಿಗ್ ಬಾಸ್ ವೀಕೆಂಡ್‌ನಲ್ಲಿ (ಶನಿವಾರ-ಭಾನುವಾರ) ಕಿಚ್ಚ ಇರೋದಿಲ್ಲ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಹೌದು ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ಅಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಿಚ್ಚ ಸುದೀಪ್ ಈ ವಾರ ಬರಲ್ಲ ಎಂದು ಹೇಳಲಾಗುತ್ತಿದ್ದು, ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಪಂಚಾಯತಿ ಇರಲ್ವಂತೆ.

ಕಿಚ್ಚ ಸುದೀಪ್ ಇಂದು ನಡೆದ ಗಂಧದ ಗುಡಿ ಪ್ರೀ ರಿಲೀಸ್ ಈವೆಂಟ್‍ನಲ್ಲಿ ಭಾಗವಹಿಸಿದ್ದು, ಅದಕ್ಕೆ ಈ ವಾರ ಬಿಗ್ ಬಾಸ್ ವಾರಾಂತ್ಯದ ಕಾರ್ಯಕ್ರಮಕ್ಕೆ ಬರಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೇ ಮೊನ್ನೆಯಷ್ಟೇ ಅಂದರೆ ಅಕ್ಟೋಬರ್ 18ರಂದು ಸುದೀಪ್ ದಂಪತಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಇದಕ್ಕಾಗಿ ಈ ದಂಪತಿ ವಿದೇಶಕ್ಕೆ ಹಾರಿದ್ದರು.. ಅಲ್ಲಿಯೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡು ಹಿಂದಿರುಗಿದ್ದು, ಕಾರಣಾಂತರಗಳಿಂದ ಮುಂದಿನ ವಾರಾಂತ್ಯದ ಸಂಚಿಕೆಗಳಲ್ಲಿ ಕಿಚ್ಚ ಸುದೀಪ್ ಪಾಲ್ಗೊಳ್ಳುವುದಿಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ವಾಹಿನಿಯಿಂದ ಮಾತ್ರ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.