ಬಾಲಿವುಡ್‌ ಹಾಟ್‌ ಗರ್ಲ್‌ ಉರ್ಫಿ ವಿರುದ್ಧ ಬಿತ್ತು ಕೇಸ್

ಬಾಲಿವುಡ್‌ ಹಾಟ್‌ ಗರ್ಲ್‌ ಉರ್ಫಿ ಜಾವೇದ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಜನಪ್ರಿಯ ತಾರೆ ಇತ್ತೀಚೆಗೆ ಬಿಡುಗಡೆ ಮಾಡಿದ ಸಂಗೀತದ ವಿಡಿಯೋ “ಹಾಯ್‌ ಹಾಯ್ ಯೆ ಮಜ್ಬೂರಿ” ಇಂದಾಗಿ ಈ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೆಹಲಿಯಲ್ಲಿ ಉರ್ಫಿ ವಿರುದ್ಧ ಅನಾಮಧೇಯ ದೂರು ದಾಖಲಿಸಲಾಗಿದೆ.

ಅಕ್ಟೋಬರ್ 11 ರಂದು ಯೂಟ್ಯೂಬ್‌ನಲ್ಲಿ ಬಂದ ಈ ಹಾಡಿನಲ್ಲಿ ಉರ್ಫಿ ಕೆಂಪು ಸೀರೆಯಲ್ಲಿ ಹಾಟ್ ಆಗಿ ಕಾಣಿಸುತ್ತಿದ್ದಾರೆ. ಇದು ಹೊರಬಂದಾಗಿನಿಂದ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಹಾಡು ಈಗಾಗಲೇ 8 ಮಿಲಿಯನ್‌ಗಿಂತಲೂ ಹೆಚ್ಚು ಡಿಜಿಟಲ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅದರಲ್ಲಿ ನಟಿಯ ಈ ಅವತಾರ ಪಡ್ಡೆ ಹುಡುಗರ ನಿದ್ದೆಗೆಡಿಸುವಂತಿದೆ.

https://www.instagram.com/p/CkJPROJKJoK/?utm_source=ig_embed&ig_rid=66ec154f-5c7c-434f-b382-fef7579a66bb

ಅಕ್ಟೋಬರ್ 23 ರಂದು ತನ್ನ ವಿರುದ್ಧ ದಾಖಲಾಗಿರುವ ದೂರಿಗೆ ನಟಿ ಇನ್ನೂ ಪ್ರತಿಕ್ರಿಯಿಸಿಲ್ಲ. ಇದಕ್ಕೂ ಮೊದಲು, ಉರ್ಫಿ ಹಾಡಿನ ಚಿತ್ರೀಕರಣದ ವಿಡಿಯೋ ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ, ಉರ್ಫಿ ಆಫ್-ಶೋಲ್ಡರ್ ಬ್ಲೌಸ್‌ನೊಂದಿಗೆ ಟ್ಯಾಂಗರಿನ್ ಸೀರೆಯನ್ನು ಧರಿಸಿದ್ದಾರೆ. ಸುತ್ತಲೂ ನರ್ತಕಿಯರೊಂದಿಗೆ ಹಾಡಿಗೆ ಕುಣಿಯುತ್ತಿದ್ದು, ನಟಿ ತಾನು ನಿಂತಿರುವ ಸ್ವಿಂಗ್‌ನಿಂದ ಜಾರಿ ಬೀಳುತ್ತಾಳೆ. ನಟಿ ಉರ್ಫಿ ಜಾವೇದ್​ ಅವರು ಈ ರೀತಿ ಬಟ್ಟೆ ಧರಿಸುವ ಮೂಲಕ ಅಶ್ಲೀಲವಾಗಿ ನಡೆದುಕೊಂಡಿದ್ದಾರೆ ಎಂದು ಅವರ ವಿರುದ್ಧದ ದೂರಿನಲ್ಲಿ ಉಲ್ಲೇಖಿಸಲಾಗಿದೆ.