ಬಂಟ್ವಾಳ: ಜಾನುವಾರು ಕಳವುಗೈದು ಅಕ್ರಮ ಸಾಗಾಟ; ಓರ್ವನ ಬಂಧನ

ಬಂಟ್ವಾಳ: ಜಾನುವಾರುಗಳನ್ನು ಕಳವುಗೈದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಪೈಕಿ ಓರ್ವನನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಸತ್ತಿಕಲ್ಲು ನಿವಾಸಿ ಅಬ್ದುಲ್ ಸತ್ತಾರ್ ಬಂಧಿತ ಆರೋಪಿಯಾಗಿದ್ದು, ಬಂಟ್ವಾಳ ನಗರ ಠಾಣೆಯ ಎಸ್ ಐ ಹಾಗೂ ಇತರೆ ಸಿಬ್ಬಂದಿಗಳು ಅ.15 ರಂದು ಕಲ್ಲಡ್ಕ ಸಮೀಪದ ಪೂರ್ಲಿಪ್ಪಾಡಿ ಎಂಬಲ್ಲಿ ಕಳವು ಗೈದ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಪತ್ತೆಹಚ್ಚಿದ್ದರು.

ಈ ಸಂಬಂಧ ಒಬ್ಬನನ್ನು ಬಂಧಿಸಿ ಎರಡು ಜಾನುವಾರುಗಳ ರಕ್ಷಣೆ ಮಾಡಿದ್ದು, ಅಂದು ಬಿಳಿಯೂರು ಗ್ರಾಮದ ಸತ್ತಿಕಲ್ಲು ನಿವಾಸಿ ಸತ್ತಾರ್ ಹಾಗೂ ರಿಫಾಝ್ ಎಂಬವರು ಪರಾರಿಯಾಗಿದ್ದರು. ಇದೀಗ ಇಬ್ಬರಲ್ಲಿ ಸತ್ತಾರ್ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.