ಪುತ್ತೂರು- ಕಡಬ-ಸುಬ್ರಹ್ಮಣ್ಯದ ಈ ಪ್ರದೇಶಗಳಲ್ಲಿ ನಾಳೆ ಪವರ್ ಕಟ್

ಪುತ್ತೂರು : 33ಕೆ.ವಿ ಪುತ್ತೂರು- ಕಡಬ-ಸುಬ್ರಹ್ಮಣ್ಯ ವಿದ್ಯುತ್ ಮಾರ್ಗದಲ್ಲಿಯೂ ತುರ್ತುನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು, ಅ.20ರಂದು ಅಂದರೆ ನಾಳೆ ಬೆಳಿಗ್ಗೆ 10ರಿಂದ ಸಾಯಂಕಾಲ 5ರವರೆಗೆ 33ಕೆ.ವಿ ಪುತ್ತೂರು-ಕಡಬ- ಸುಬ್ರಹ್ಮಣ್ಯ ವಿದ್ಯುತ್ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ಹೊರಡಿಸಿದೆ.

ಕ್ಯಾಂಸ್ಕೋ ಚೊಕೋಲೇಟ್ ಫ್ಯಾಕ್ಟರಿ ಆವರಣದಲ್ಲಿ ತುರ್ತು ಕಾಮಗಾರಿ ಹಿನ್ನಲೆ 33/11 ಕೆ.ವಿ ಕಡಬ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರ್ ಗಳಾದ ಉಪ್ಪಿನಂಗಡಿ ಒಲ್ಡ್ ರಾಮಕುಂಜ, ವಾಟರ್‌ಸ್ಟ್, ಇಂಡಸ್ಟ್ರಿಯಲ್ ದರ್ಜೆ ಮತ್ತು ಮುತ್ತೂರು ಟೌನ್ ಫೀಡ‌ಗಳಲ್ಲಿ ಬೆಳಿಗ್ಗೆ 10ರಿಂದ ಅಪರಾಹ್ನ 2 ರವರೆಗೆ ವಿದ್ಯುತ್ ನಿಲುಗಡೆ ಆಗಲಿದೆ.

ಈ ಹಿನ್ನಲೆ 110/33/11 ಕೆ.ವಿ ಮುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಈ ಮೇಲೆ ತಿಳಿಸಿದ ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ಪುತ್ತೂರು ನಗರ, ದರ್ಬೆ, ಮೊಟ್ಟೆತ್ತಡ್ಕ, ಬೊಳ್ಳಾರು, ಬೆಳ್ಳಿಪ್ಪಾಡಿ, ಕೋಡಿಂಬಾಡಿ, ಚಿಕ್ಕಮುಡೂರು ಗ್ರಾಮದ ವಿದ್ಯುತ್ ಬಳಕೆದಾರರು ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.