ಬೆಂಗಳೂರು: ನಾಳೆಯಿಂದ ಕಾರು ಮತ್ತು ಜೀಪ್ಗಳಲ್ಲಿ ಪ್ರಯಾಣಿಸುವ ಹಿಂಬದಿ ಸವಾರರಿಗೆ ಸೀಟ್ ಬೆಲ್ಟ್ ಕಡ್ಡಾಯವಾಗಿದ್ದು. ನಿಯಮ ಉಲ್ಲಂಘಿಸಿದರೆ 1 ಸಾವಿರ ರೂ ದಂಡ ಬೀಳಲಿದೆ.
ಈ ಸಂಬಂಧ ಅ.ರಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸುತ್ತೋಲೆ ಹೊರಡಿಸಿದ್ದು, ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ರಾಜ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಎಲ್ಲಾ ವಲಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಬೆಂಗಳೂರು ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದ್ದರು.
ಈ ಹಿನ್ನೆಲೆಯಲ್ಲಿ ನಾಳೆಯಿಂದಲ್ಲೇ ಈ ನಿಯಮ ಜಾರಿ ಆಗಲಿದ್ದು, ಹಿಂಬದಿ ಸವಾರರು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿದೆ.
ಎಂ–1 ವಾಹನ ಎಂದರೆ ಚಾಲಕ ಹೊರತುಪಡಿಸಿ ಎಂಟು ಮತ್ತು ಅದಕ್ಕಿಂತ ಕಡಿಮೆ ಸೀಟುಗಳನ್ನು ಹೊಂದಿರುವ ವಾಹನಗಳಲ್ಲಿ ಮುಮ್ಮುಖವಾಗಿ ಇರುವ ಎಲ್ಲಾ ಸೀಟುಗಳಲ್ಲಿ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ. ಈ ನಿಯಮ ಕಡ್ಡಾಯವಾಗಿ ಪಾಲನೆ ಆಗುವಂತೆ ನೋಡಿಕೊಳ್ಳಬೇಕು ಎಂದೂ ಕೇಂದ್ರ ಸರ್ಕಾರ ಸುತ್ತೋಲೆಯಲ್ಲಿ ತಿಳಿಸಿದೆ.
ಹಿಂಬದಿಯ ಸೀಟುಗಳಿಗೆ ಕವರ್ಗಳನ್ನು ಅಳವಡಿಸುವಾಗ ಸೀಟ್ ಬೆಲ್ಟ್ ಲಾಕ್ ಮಾಡುವ ಮತ್ತು ಅನ್ಲಾಕ್ ಮಾಡುವ ಬಕಲ್ಗಳನ್ನು ಮುಚ್ಚದಂತೆ ನೋಡಿಕೊಳ್ಳಬೇಕು ಎಂದೂ ಸುತ್ತೋಲೆ ಹೇಳಿದೆ.