ಡಾ ಭುಜಂಗ ಶೆಟ್ಟಿ ನಿಧನ – ಜಿಮ್​ ವೇಳೆ ಹೃದಯಾಘಾತ

ಖ್ಯಾತ ನೇತ್ರ ವೈದ್ಯ, ನಾರಾಯಣ ನೇತ್ರಾಲಯದ ಡಾ ಭುಜಂಗ ಶೆಟ್ಟಿ ಇನ್ನಿಲ್ಲ.

ಇವತ್ತು ಮನೆಯಲ್ಲಿ ಸಂಜೆ 6 ಗಂಟೆಗೆ ಜಿಮ್​ ಮಾಡಬೇಕಾದರೆ ತೀವ್ರ ಹೃದಯಘಾತಕ್ಕೊಳಗಾಗಿದ್ದಾರೆ. ತಕ್ಷಣವೇ ಅವರನ್ನು ಮಣಿಪಾಲ್​ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ಇವರಿಗೆ 69 ವರ್ಷ ವಯಸ್ಸಾಗಿತ್ತು.

ಇವರ ಪುಸ್ತಕ ರಿವರ್ಸ್​ ಡಯಾಬಿಟಿಸ್​ ಸಾಕಷ್ಟು ಪ್ರಸಿದ್ಧಿ ಪಡೆದಿತ್ತು.