ಜಾಮಿಯ ಮಸೀದಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಮಂಡ್ಯ ಜಿಲ್ಲಯ ಶ್ರೀರಂಗಪಟ್ಟಣದಲ್ಲಿರುವ ಜಾಮಿಯಾ ಮಸೀದಿಯಲ್ಲಿ ಆಂಜನೇಯನ ಪೂಜೆಗೆ ಅವಕಾಶ ನೀಡಿ ಎಂದು ಹಿಂದೂ ಕಾರ್ಯಕರ್ತರು ಮಂಡ್ಯ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಮೂಡಲ ಬಾಗಿಲು ಆಂಜನೇಯ ದೇವಸ್ಥಾನದ ಮೇಲೆ ಮಸೀದಿ ಮಾಡಲಾಗಿದೆ. ಈ ಬಗ್ಗೆ ಅನೇಕ ಇತಿಹಾಸಕಾರರು ದಾಖಲೆ ಉಲ್ಲೇಖ ಮಾಡಿದ್ದಾರೆ. ಸ್ವತಃ ಟಿಪ್ಪು ಪರ್ಶಿಯಾದ ಖಲೀಫ್ಗೆ ಬರೆದ ಪತ್ರದಲ್ಲಿ ಹೇಳಿಕೊಂಡಿದ್ದಾರೆ. ಮಸೀದಿ ಆಂಜನೇಯನ ದೇವಾಲಯವಾಗಿತ್ತು ಎಂಬುದಕ್ಕೆ ಇಂದಿಗೂ ಕುರುಹುಗಳಿವೆ. ಕಲ್ಯಾಣಿ ಸೇರಿದಂತೆ ಹಿಂದೂ ದೇವರುಗಳ ಕೆತ್ತನೆ ಕಾಣುತ್ತಿದೆ.
ಪುರಾತತ್ವ ಇಲಾಖೆಯಿಂದ ದಾಖಲೆ ಪರಿಶೀಲನೆ ಮಾಡಬೇಕು. ಕಾನೂನು ಬದ್ದವಾಗಿ ಆಂಜನೇಯನ ಪೂಜೆಗೆ ಅವಕಾಶ ನೀಡಬೇಕು ಎಂದು ಕರ್ನಾಟಕ ನರೇಂದ್ರ ಮೋದಿ ವಿಚಾರ ಮಂಚ್ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ. ಆಂಜನೇಯನ ಪೂಜೆಗೆ ಅವಕಾಶ ನೀಡದಿದ್ರೆ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.