ವಾಹನಗಳ ಟೋಯಿಂಗ್ ಮಾಡುತ್ತಿದ್ದ ಪೊಲೀಸ್ಗೆ ಕಲ್ಲಿನಿಂದ ಹೊಡೆದರೆಂಬ ಕಾರಣಕ್ಕೆ, ಟ್ರಾಫಿಕ್ ಎಎಸ್ಐ ಪೊಲೀಸ್ ನಾರಾಯಣ ಎನ್ನುವವರು ಅಂಗವಿಕಲ ಮಹಿಳೆಗೆ ಬೂಟುಗಾಲಿನಿಂದ ಒದ್ದಿರುವ ಪ್ರಕರಣದ ತನಿಖೆ ನಡೆಸಲು ಗೃಹ ಸಚಿವ ಸೂಚನೆ ನೀಡಿದ್ದಾರೆ.
ಘಟನೆ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಒಬ್ಬ ಅಮಾಯಕ ಮಹಿಳೆಯ ಮೇಲೆ ಪೊಲೀಸ್ ಅಧಿಕಾರಿಯೊಬ್ಬರು ಅವಾಚ್ಯ ಮಾತುಗಳನ್ನು ಬಳಸಿದ್ದಲ್ಲದೆ, ಹಲ್ಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಸೂಚಿಸಿರುವೆ ಎಂದಿದ್ದಾರೆ.
ಯಾರೇ ಆದರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು, ಇದಕ್ಕೆ ಪೊಲೀಸರೂ ಹೊರತಾಗಿಲ್ಲ ಎಂದೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.