Saturday, April 20, 2024

ಪ್ರಧಾನಿ ಭೇಟಿಗೆ ದೆಹಲಿಗೆ ಸಿಎಂ ಯೋಗಿ- ಯಾರಾಗಬಹುದು ಡಿಸಿಎಂ, ಸಚಿವರು..?

ಉತ್ತರಪ್ರದೇಶದಲ್ಲಿ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬರುವ ಮೂಲಕ ಇತಿಹಾಸ ನಿರ್ಮಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವತ್ತು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆಗಲಿದ್ದಾರೆ.

ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ಜೆ ಪಿ ನಡ್ಡಾ, ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್‌ರನ್ನು ಭೇಟಿ ಆಗಲಿದ್ದಾರೆ.

ಹೊಸ ಸರ್ಕಾರ ರಚನೆ ಸಂಬAಧ ದೆಹಲಿ ಭೇಟಿ ವೇಳೆ ಸಿಎಂ ಯೋಗಿ ಚರ್ಚೆ ನಡೆಸಲಿದ್ದಾರೆ.

ಈ ಬಾರಿಯೂ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮಾಡುವ ಸಾಧ್ಯತೆ ಇದೆ. ಸಿರಾತು ಕ್ಷೇತ್ರದಿಂದ ಸೋತಿದ್ದರೂ ಡಿಸಿಎಂ ಆಗಿದ್ದ ಕೇಶವ್ ಪ್ರಸಾದ್ ಮೌರ್ಯರನ್ನು ಮತ್ತೆ ಡಿಸಿಎಂ ಮಾಡುವ ಸಾಧ್ಯತೆ ಇದೆ. ಇನ್ನು ಸ್ವತಂತ್ರ ದೇವ್ ಸಿಂಗ್, ಬಾಬಿ ರಾಣಿ ಮೌರ್ಯ, ಬ್ರಿಜೇಶ್ ಪಾಠಕ್ ಹೆಸರೂ ಡಿಸಿಎಂ ಹುದ್ದೆ ಪಟ್ಟಿಯಲ್ಲಿದೆ ಎಂದು ವರದಿ ಆಗಿದೆ.

ಜೊತೆಗೆ ಇತ್ತೀಚೆಗಷ್ಟೇ ಜಾರಿ ನಿರ್ದೇಶಾನಲಯದಿಂದ ನಿವೃತ್ತಿ ಹೊಂದಿ ಬಿಜೆಪಿ ಟಿಕೆಟ್‌ನಲ್ಲಿ ಗೆದ್ದಿರುವ ರಾಜೇಶ್ವರ್ ಸಿಂಗ್ ಮತ್ತು ಆಸಿಮ್ ಅರುಣ್ ಇಬ್ಬರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳಬಹುದು.

ಸಿಎಂ ಯೋಗಿಗೆ ಆಪ್ತ ಶಲಭ್ ಮನಿ ತ್ರಿಪಾಠಿಯೂ ಸಂಪುಟ ಸೇರುವ ನಿರೀಕ್ಷೆ ಇದೆ. ಮಾರ್ಚ್ 15ರಿಂದ ಮಾರ್ಚ್ 21ರ ನಡುವೆ ಹೊಸ ಸರ್ಕಾರದ ಪ್ರಮಾಣವಚನ ಸ್ವೀಕಾರ ನಡೆಯಬಹುದು.

error: Content is protected !!