Gautam Adani: ಮೋದಿ ಸರ್ಕಾರದಿಂದ ಗೌತಮ್​ ಅದಾನಿಗೆ Z ಭದ್ರತೆ

ಗುಜರಾತ್​ ಮೂಲದ ಉದ್ಯಮಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಆಪ್ತ ಎಂದೇ ಭಾವಿಸಲಾಗಿರುವ ಗೌತಮ್​ ಅದಾನಿಗೆ (Gautam Adani) ಕೇಂದ್ರ ಸರ್ಕಾರ ಝಡ್​ (Z) ಕೆಟಗರಿ ಭದ್ರತೆಯನ್ನು ನೀಡಿದೆ.
ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಗುಪ್ತಚರ ಇಲಾಖೆಯ (IB) ಮಾಹಿತಿಯನ್ನು ಆಧರಿಸಿ ಝಡ್​ ಭದ್ರತೆಯನ್ನು ನೀಡಲಾಗಿದೆ.
ಝಡ್​ ಭದ್ರತೆಯಡಿ ಗೌತಮ್​ ಅದಾನಿ ಅವರಿಗೆ 30 ಸೇನಾ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗುತ್ತದೆ.
ಝಡ್​ ಭದ್ರತೆಯ ವೆಚ್ಚವನ್ನು ಗೌತಮ್​ ಅದಾನಿಯವರೇ ಭರಿಸಲಿದ್ದಾರೆ.
ಗುಪ್ತಚರ ವರದಿ ಆಧರಿಸಿ ಅದಾನಿ ಅವರಿಗೆ ಇರುವ ಬೆದರಿಕೆಯ ತೀವ್ರತೆಯನ್ನು ಆಧರಿಸಿ ಝಡ್​ ಭದ್ರತೆ ನೀಡಲಾಗಿದೆ.
ಉದ್ಯಮಿಗಳಾದ ಮುಖೇಶ್​ ಅಂಬಾನಿ (Mukesh Ambani) ಮತ್ತು ಪತ್ನಿ ನೀತು ಅಂಬಾನಿಯವರೂ (Nitu Ambani) ಈಗಾಗಲೇ ಝಡ್​ ಭದ್ರತೆ ಹೊಂದಿದ್ದಾರೆ.

LEAVE A REPLY

Please enter your comment!
Please enter your name here