ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 24 ವರ್ಷದ ಯವತಿ ಮೇಲೆ ಆ್ಯಸಿಡ್ ಅಟ್ಯಾಕ್ ನಡೆದಿದೆ. ಪ್ರೀತಿಗೆ ನಿರಾಕರಿಸಿದ್ದಕ್ಕೆ ಭಗ್ನಪ್ರೇಮಿ ಕೃತ್ಯ ಎಸಗಿದ್ದಾನೆ.
ಸುಂಕದ ಕಟ್ಟೆಯ ಮುತ್ತೂಟ್ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ನಾಗೇಶ್ ಎಂಬಾತ ಆ್ಯಸಿಡ್ ಎರಚಿದ್ದಾನೆ. ಯುವತಿ ನಾಗೇಶ್‌ನ ಪ್ರೀತಿ ನಿರಾಕರಿಸಿದ್ದಳು ಎನ್ನಲಾಗಿದೆ. ಇದೇ ವಿಚಾರಕ್ಕೆ ನಿನ್ನೆ ಸಂಜೆಯೂ ಯುವತಿ ಹಾಗೂ ನಾಗೇಶ್ ನಡುವೆ ಗಲಾಟೆ ನಡೆದಿತ್ತು. ಅದೇ ದ್ವೇಷದಿಂದ ಇಂದು ಆಕೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಬಂದು ಆ್ಯಸಿಡ್ ಎರಚಿ, ಎಸ್ಕೇಪ್ ಆಗಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್ ಪಾಟೀಲ್, ಬೆಳಗ್ಗೆ 8.30ರಿಂದ 8.45ರ ಸುಮಾರಿಗೆ ಆ್ಯಸಿಡ್ ದಾಳಿ ನಡೆದಿದೆ. ಸುಂಕದಕಟ್ಟೆ ಬಸ್ ನಿಲ್ದಾಣದ ಬಳಿ ಆ್ಯಸಿಡ್ ದಾಳಿ ನಡೆದಿದೆ.
ಯುವತಿಯ ಕತ್ತು, ಬೆನ್ನು, ತಲೆ ಭಾಗಕ್ಕೆ ಗಾಯವಾಗಿದೆ. ಗಾಯಾಳು ಯುವತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಯುವತಿ ಆರೋಗ್ಯದಲಲ್ಲಿ ಚೇತರಿಕೆ ಕಂಡು ಬಂದಿದೆ. ಆರೋಪಿ ನಾಗೇಶ್ ಬಂಧನಕ್ಕೆ ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.