ಕೆಜಿಎಫ್ 1,2 ಸಿನಿಮಾ ಮೂಲಕ ಇಂಡಿಯನ್ ಬಾಕ್ಸಾಫೀಸ್‌ನಲ್ಲಿ ಕಾಸಿನ ವರ್ಷ ಸುರಿಸಿದ್ದವರು ನಟ ಯಶ್(Yash). ಪ್ರಶಾಂತ್ ನೀಲ್ (Prashant Neel)ನಿರ್ದೇಶಿಸಿದ ಈ ಚಿತ್ರಗಳ ಮೂಲಕ ಯಶ್ ಪ್ಯಾನ್ ಇಂಡಿಯನ್ ಸ್ಟಾರ್ ಆಗಿಬಿಟ್ಟಿದ್ದಾರೆ. ಕೆಜಿಎಫ್ ಚಿತ್ರದ ನಂತರ ಯಶ್ ಮುಂದಿನ ಚಿತ್ರ ಯಾವುದು ಎನ್ನುವುದು ಅಭಿಮಾನಿಗಳ ಕುತೂಹಲ.
ಡೈರೆಕ್ಟರ್ ಯಾರು..?
ಯಶ್ ಮುಂದಿನ ಸಿನಿಮಾ ಯಾವುದು???. ಇದಕ್ಕೆ ಉತ್ತರ ಎಂಬಂತೆ ಕಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಭಾರೀ ಸಿನಿಮಾಗಳ ನಿರ್ದೇಶಕ ಶಂಕರ್ (Director Shankar)ನಿರ್ದೇಶನದ ಚಿತ್ರದಲ್ಲಿ ಯಶ್ ನಟಿಸುತ್ತಾರೆ ಎಂಬ ಟಾಕ್ ಕೇಳಿಬರುತ್ತಿದೆ.
ಬಜೆಟ್ ಎಷ್ಟು..?
ಸೆನ್ಸೇಷನಲ್ ಕಾಂಬಿನೇಷನ್‌ನಲ್ಲಿ ಮೂಡಿಬರುವ ಚಿತ್ರದ ಬಜೆಟ್ 1000 ಕೋಟಿ ಎನ್ನುವುದು ಲೇಟೆಸ್ಟ್ ಸಮಾಚಾರ. ಈ ಹೈ ಬಜೆಟ್ ಚಿತ್ರವನ್ನು ಕರಣ್ ಜೊಹರ್(Karan Johar), ನೆಟ್ ಫ್ಲಿಕ್ಸ್ ಇಂಡಿಯಾ(Netflix India), ಪೆನ್ ಮೀಡಿಯಾ (Pen Media) ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುವ ಅವಕಾಶವಿದೆ.
ಕಥೆ ಏನು?
ತಮಿಳಿನ ಎಪಿಕ್ ಕಾದಂಬರಿ ವಲ್ಪರಿ(Valpari)ಯನ್ನು ಆಧರಿಸಿ ಈ ಸಿನಿಮಾವನ್ನು ಶಂಕರ್ ತೆರೆಗೆ ತರಲು ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಕಾದಂಬರಿಕಾರ ಸು. ವೆಂಕಟೇಶನ್ ( Su Venkatesan)ವಿರಚಿತ ಈ ಕಾದಂಬರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ.
ಹೆಚ್ಚಿನ ಮಾಹಿತಿ ಯಾವಾಗ?
ಯಶ್-ಶಂಕರ್ ಕಾಂಬಿನೇಷನ್‌ನ ಈ ಸಿನಿಮಾ ಬಗ್ಗೆ ಫುಲ್ ಡೀಟೇಲ್ಸ್/ಅಪ್‌ಡೇಟ್ ಸಿಗುವುದಕ್ಕೆ ಇನ್ನಷ್ಟು ದಿನ ಕಾಯಬೇಕು. ಏಕೆಂದರೇಸದ್ಯ ಶಂಕರ್ ಬಳಿ ಎರಡು ಪ್ರಾಜೆಕ್ಟ್ ಇದೆ. ಕಮಲ್ ಹಾಸನ್ (Kamal Hassan)ಜೊತೆ ಭಾರತೀಯುಡು-2 (Indian 2)ಸಿನಿಮಾಗೆ ಶಂಕರ್ ವರ್ಕ್ ಮಾಡ್ತಿದ್ದಾರೆ. ಇದಾದ ಬಳಿಕ ರಾಮ್‌ಚರಣ್ (RamCharan)ನಟನೆಯ ಚಿತ್ರವನ್ನು ಶಂಕರ್ ನಿರ್ದೇಶಿಸಬೇಕಿದೆ.