ಮಗಳು ಐರಾ ಬಗ್ಗೆ ರಾಕಿಂಗ್‌ ಸ್ಟಾರ್‌ ಯಶ್‌ ಹೇಳಿದ್ದೇನು..?

ಸಿನಿಮಾ ನಟ-ನಟಿಯರ ಮಕ್ಕಳು ಅಂದ್ರೆ ಎಲ್ಲರಿಗೂ ಕ್ರೇಜ್‌. ಸಹಜವಾಗಿಯೇ ತಮ್ಮ ನೆಚ್ಚಿನ ಹೀರೋ-ಹೀರೋಯಿನ್‌ಗಳ ಫ್ಯಾನ್ಸ್‌ ಅವರ ಮಕ್ಕಳಿಗೂ ಫ್ಯಾನ್ಸ್‌ ಆಗಿಬಿಡ್ತಾರೆ. ಆದರೆ ಯಶ್‌ ತಮ್ಮ ಮಗಳು ಐರಾ ಬಗ್ಗೆ ಆಡಿರುವ ಮಾತು ಎಲ್ಲ ಮೆಚ್ಚುಗೆಗೂ ಪಾತ್ರವಾಗಿದೆ.

ನನ್ನ ಮಗಳನ್ನು ನೋಡಬೇಕು ಅಂತ ಅಭಿಮಾನಿಗಳು ಮನೆವರೆಗೂ ಬಂದಿರ್ತಾರೆ. ಆದರೆ ಯಾವತ್ತೂ ಈ ತಪ್ಪನ್ನು ಮಾಡೋಕೆ ಹೋಗ್ಬೇಡಿ. ಅವರಾಗಿಯೇ ಯಾವತ್ತಾದ್ರೂ ಸಾಧಿಸಿದ ಮೇಲೆ ಅವರಿಗೆ ಗೌರವ ಕೊಡಿ. ಯಾರದ್ದೋ ಮಕ್ಕಳನ್ನು ಅಂಥ ಅವರಿಗೆ ಗೌರವ ಕೊಡಬೇಡಿ. ಅವರು ಏನು ಕೆಲ್ಸ ಮಾಡಿರ್ತಾರೆ ಅದಕ್ಕೆ ಗೌರವ ಕೊಡಿ. ನನ್ನ ಮಕ್ಕಳೂ ಆಗಿರಬಹುದು, ಬೆಳೆದು ಒಳ್ಳೆ ಕೆಲ್ಸ ಮಾಡಿದ್ಮೇಲೆ ಗೌರವ ಕೊಡಿ. ಪ್ರೀತಿ ತೋರಿಸಿ ಅಷ್ಟೇ ಅಂತ ಯಶ್‌ ಹೇಳಿದ್ದಾರೆ.

ಝೀ ಕನ್ನಡ ಆಯೋಜಿಸಿದ್ದ ಕರುನಾಡ ಸಂಭ್ರಮದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ವೇದಿಕೆ ಮೇಲೆ ಬಂದಾಗ ಎಲ್ಲರೂ ಐರಾ ಐರಾ ಎಂದು ಮಗಳ ಹೆಸರನ್ನು ಕೂಗಲು ಶುರು ಮಾಡಿದರು. ಆಗ ಯಶ್‌ ಆಡಿದ ಮಾತುಗಳು ಈ ವೈರಲ್‌ ಆಗಿವೆ.

LEAVE A REPLY

Please enter your comment!
Please enter your name here