ADVERTISEMENT
ಬೆಂಗಳೂರಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನೇ ಹೋಲುವ 10 ಕೋಟಿ ರೂಪಾಯಿ ಮೊತ್ತದ ಜೆರಾಕ್ಸ್ ನೋಟುಗಳು ಪತ್ತೆ ಆಗಿವೆ.
ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕನಕಪುರ ರಸ್ತೆಯ ಪಕ್ಕದಲ್ಲಿ ಎರಡು ರಟ್ಟಿನ ಬಾಕ್ಸ್ ಮತ್ತು ಸೂಟ್ಕೇಸ್ಗಳಲ್ಲಿ 2 ಸಾವಿರ ಮುಖಬೆಲೆಯ ನೋಟುಗಳನ್ನೇ ಹೋಲುವ ಜೆರಾಕ್ಸ್ ನೋಟುಗಳನ್ನು ಎಸೆದು ಹೋಗಲಾಗಿದೆ.
2 ಸಾವಿರ ಮುಖಬೆಲೆಯ ನೋಟುಗಳನ್ನು ವಾಪಸ್ ಪಡೆಯುವ ಬಗ್ಗೆ ಮಾರ್ಚ್ 23ರಂದು ಆರ್ಬಿಯ ಸುತ್ತೋಲೆ ಹೊರಡಿಸಿತ್ತು.
ಜೆರಾಕ್ಸ್ ನೋಟುಗಳ ಬಾಕ್ಸ್ಗಳ ಪಕ್ಕದಲ್ಲಿ ತಾಮ್ರದ ಚೆಂಬುಗಳೂ ಪತ್ತೆಯಾಗಿದ್ದು, ರೈಸ್ ಪುಲ್ಲಿಂಗ್ ದಂಧೆಯವರೇ ಈ ಜೆರಾಕ್ಸ್ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ಯತ್ನಿಸಿರಬಹುದು ಎಂದು ಅನುಮಾನವಿದೆ.
ಆರ್ಬಿಐ 2 ಸಾವಿರ ರೂಪಾಯಿ ನೋಟುಗಳನ್ನು ವಾಪಸ್ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಜೆರಾಕ್ಸ್ ನೋಟುಗಳನ್ನು ಚಲಾವಣೆ ಮಾಡಲಾಗದೇ ಎಸೆದುಹೋಗಿರುವ ಸಾಧ್ಯತೆ ಇದೆ.
ADVERTISEMENT