ಇವತ್ತು ವಿಶ್ವ ತಂಬಾಕು ರಹಿತ ದಿನಾಚರಣೆ. ಈ ಹಿನ್ನೆಲೆಯಲ್ಲಿ ತಂಬಾಕು ತ್ಯಜಿಸಿ ಪರಿಸರ ಸಂರಕ್ಷಿಸಿ ಧ್ಯೇಯವಾಕ್ಯದೊಂದಿಗೆ ತಂಬಾಕು ವಿರುದ್ಧ ಮತ್ತು ಕ್ಯಾನ್ಸರ್ ಹಾಗೂ ಪರಿಸರದ ಬಗ್ಗೆ ಬೆಂಗಳೂರನಲ್ಲಿರುವ ಪ್ರತಿಷ್ಠಿತ ಕ್ಯಾನ್ಸರ್ ಆಸ್ಪತ್ರೆ ಕಿದ್ವಾಯಿ ಜಾಗೃತಿ ಮೂಡಿಸುತ್ತಿದೆ.
ತಂಬಾಕು ಬಳಕೆಯ ಹಾನಿಕಾರಕ ಮತ್ತು ಮಾರಕ ಪರಿಣಾಮಗಳ ಕುರಿತು ಹಾಗೂ ಪರೋಕ್ಷ ಧೂಮಪಾನದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ 31ರಂದು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಲ್ಲದೆ, ಯಾವುದೇ ರೂಪದಲ್ಲಿ ತಂಬಾಕು ಬಳಕೆಯನ್ನು ತಡೆಗಟ್ಟುವ ಪ್ರಯತ್ನಗಳಿಗೆ ಒಂದು ಉತ್ತಮ ಅವಕಾಶ ಒದಗಿಸುತ್ತಿದೆ.
ತಂಬಾಕು ಸೇವನೆಯು ಕ್ಯಾನ್ಸರ್‌ನಿಂದ ಶುರುವಾಗಿ ವಿವಿಧ ದೀರ್ಘಕಾಲದ ಉಸಿರಾಟಕ್ಕೆ ಸಂಬAಧಿಸಿದ ಕಾಯಿಲೆಗಳವರೆಗೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಈ ಕುರಿತು ಜಾಗೃತಿ ಮೂಡಿಸುವುದು ವಿಶ್ವ ತಂಬಾಕು ರಹಿತ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ಪರಿಸರ ಸಂರಕ್ಷಣೆ ಎಂಬುದು ಪ್ರಸ್ತುತ, 2022ರ ಸಾಲಿನ ಘೋಷ-ವಾಕ್ಯವಾಗಿದೆ. ತಂಬಾಕು ಸೇವನೆಯ ಪ್ರಮಾಣವನ್ನು ಕಡಿಮೆ ಮಾಡಲು ಪರಿಣಾಮಕಾರಿ ನೀತಿಗಳನ್ನು ರೂಪಿಸಿ ಜಾರಿಗೊಳಿಸುವ ಕ್ರಮಗಳನ್ನು ಕೈಗೊಳ್ಳುವತ್ತ ಒಂದು ಎಚ್ಚರಿಕೆಯ ಕರೆಗಂಟೆಯಾಗಿದೆ.
ಪೌಷ್ಠಿಕಾAಶದ ಕೊರತೆ, ಅನಕ್ಷರತೆ, ಪರಿಸರ ಮಾಲಿನ್ಯ ಮತ್ತು ಮುಖ್ಯವಾಗಿ ಒಂದಲ್ಲ ಒಂದು ರೂಪದ ತಂಬಾಕು ಸೇವನೆಯಿಂದಾಗಿ ರೋಗಿಗಳ ಪರಿಸ್ಥಿತಿ ಶೋಚನೀಯವಾಗಿದೆ. ಅಲ್ಲದೆ, ಅವರಲ್ಲಿ ಬಹುತೇಕ ಜನರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳು ಅತ್ಯಂತ ಕೆಳದರ್ಜೆಯದಾಗಿವೆ. ವಿಶ್ವಾದ್ಯಂತ ಹಾಗೂ ಭಾರತದಲ್ಲಿ ತಂಬಾಕಿನ ಬಳಕೆ ಕ್ರಮೇಣ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
ಶೇಕಡಾ 27.2ರಷ್ಟು ಕ್ಯಾನ್ಸರ್ ಪ್ರಕರಣಗಳು ತಂಬಾಕು (ಹೊಗೆಯ ಮತ್ತು ಹೊಗೆರಹಿತ ರೂಪದಲ್ಲಿ) ಬಳಕೆಗೆ ಸಂಬAಧಿಸಿವೆ ಎಂದು ಅಂದಾಜಿಸಲಾಗಿದೆ. ಲಭ್ಯವಿರುವ ಮಾಹಿತಿಯು ತಂಬಾಕು ಸಂಬAಧಿತ ಕ್ಯಾನ್ಸರ್ ಹರಡುವಿಕೆಯು ಪುರುಷರಲ್ಲಿ ಹೆಚ್ಚು (ಶೇಕಡಾ 45ಕ್ಕಿಂತ ಹೆಚ್ಚು) ಎಂದು ಸೂಚಿಸುತ್ತದೆ.
ಪುರುಷರಲ್ಲಿ 90ರಷ್ಟು ಪ್ರತಿಶತ ಶ್ವಾಸಕೋಶದ ಕ್ಯಾನ್ಸರ್ ಸಾವುಗಳು ಮತ್ತು ಮಹಿಳೆಯರಲ್ಲಿ ಶೇ.80ರಷ್ಟು ಧೂಮಪಾನದಿಂದ ಉಂಟಾಗುತ್ತವೆ. ಶ್ವಾಸಕೋಶದ ಕ್ಯಾನ್ಸರ್ ಹೊರತುಪಡಿಸಿ ಅನೇಕ ಅಧ್ಯಯನಗಳು ಶ್ವಾಸಕೋಶ, ಬಾಯಿಯ ಒಳಭಾಗ, ಮೂಗು ಮತ್ತು ಹೈಪೋಫಾರ್ನೆಕ್ಸ್, ಮೂಗಿನ ಒಳಭಾಗ ಮತ್ತು ಪರಾನಾಸಲ್ ಸೈನಸ್ಗಳು, ಧ್ವನಿಪೆಟ್ಟಿಗೆಯನ್ನು, ಅನ್ನನಾಳ, ಹೊಟ್ಟೆ, ಮೇದೋಜೀರಕ ಗ್ರಂಥಿ, ಯಕೃತ್ತು, ಮೂತ್ರಪಿಂಡ (ದೇಹ ಮತ್ತು ಸೊಂಟ), ಮೂತ್ರನಾಳ, ಮೂತ್ರಕೋಶ, ಗರ್ಭಾಶಯದ ಗರ್ಭಗೊರಳು ಮತ್ತು ಅಸ್ಥಿಮಜ್ಜೆ (ಮೈಲೋಯ್ಡ್ ಲ್ಯುಕೇಮಿಯಾ) ಇವುಗಳ ಕ್ಯಾನ್ಸರ್ ಸಾಮಾನ್ಯವಾಗಿ ಕಂಡುಬರುತ್ತಿವೆ.
ಕರ್ನಾಟಕದಲ್ಲಿ ಪ್ರತಿ ವರ್ಷ ಅಂದಾಜು 20,935 (ಒಟ್ಟಾರೆ ಕ್ಯಾನ್ಸರ್ ಪ್ರಕರಣಗಳ ಪೈಕಿಲ್ಲಿ ಶೇ.24ರಷ್ಟು) ತಂಬಾಕು ಸಂಬAಧಿತ ಕ್ಯಾನ್ಸರ್ ಆಗಿದೆ. ನಿಗದಿತ ಯಾವುದೇ ಸಮಯದಲ್ಲಿ 56,524 ರೋಗಿಗಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಬೆಂಗಳೂರಿನಲ್ಲಿ ತಂಬಾಕು ಸಂಬAಧಿತ ಕ್ಯಾನ್ಸರ್ ಪ್ರಕರಣಗಳನ್ನು ಗಮನಿಸಲಾಗಿದೆ.
ಪ್ರತಿ ಒಂದು ಲಕ್ಷ ಜನಸಂಖ್ಯೆಯ ಪೈಕಿ 38 ಪುರುಷರಲ್ಲಿ ಮತ್ತು 20 ಮಹಿಳೆಯರಲ್ಲಿ ರೋಗನಿರ್ಣಯ ಮಾಡಲಾಗಿದೆ. ತಂಬಾಕು ಸಂಬAಧಿತ ಕ್ಯಾನ್ಸರ್ ಅನ್ನು ಹೊರತುಪಡಿಸಿ, ತಂಬಾಕು ಸಂಬAಧಿತ ಇತರ ಕಾಯಿಲೆಗಳಾದ ಹೃದ್ರೋಗಗಳು, ಉಸಿರಾಟದ ಕಾಯಿಲೆಗಳು, ನಿದ್ರಾಹೀನತೆ, ಮೂತ್ರನಾಳದ ಕಾಯಿಲೆಗಳು, ದುರ್ಬಲತೆ ಮತ್ತು ಮಹಿಳೆಯರಲ್ಲಿ – ಮುಟ್ಟಿನ ಅಸಮತೋಲನ, ದೋಷಯುಕ್ತ ಜನನ ಮತ್ತು ಕಡಿಮೆ ತೂಕದ ಮಗುವಿನ ಜನನ ಮತ್ತು ಗರ್ಭಗೊರಳಿನ ಕ್ಯಾನ್ಸರ್ ರೋಗಗಳು ಪತ್ತೆಯಾಗಿವೆ.
ಡಾ ಸಿ ರಾಮಚಂದ್ರ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಮುಖ್ಯಸ್ಥರು
ಕಿದ್ವಾಯಿಯಲ್ಲಿ ಪ್ರತಿವರ್ಷ 3,000ಕ್ಕೂ ಹೆಚ್ಚು ತಂಬಾಕು ಸಂಬAಧಿತ ಕ್ಯಾನ್ಸರ್ ಪ್ರಕರಣಗಳು:
ಬೆಂಗಳೂರು ಜನಸಂಖ್ಯೆ ಆಧಾರಿತ ಕ್ಯಾನ್ಸರ್ ನೋಂದಾವಣೆಯ ಪ್ರಕಾರ ತಂಬಾಕು ಸಂಬAಧಿತ ಕ್ಯಾನ್ಸರ್ ರೋಗಿಗಳ ಸರಾಸರಿ ವಯೋಮಾನ ಹೊಂದಾಣಿಕೆಯ ಪ್ರಮಾಣವು ಒಂದು ಲಕ್ಷ ಪುರುಷರಲ್ಲಿ 40 ಮತ್ತು ಒಂದು ಲಕ್ಷ ಮಹಿಳೆಯರಲ್ಲಿ 21 ಆಗಿದೆ. ಕಿದ್ವಾಯಿ ಸಂಸ್ಥೆಯಲ್ಲಿ ಪ್ರತಿವರ್ಷ 3,000 ಕ್ಕೂ ಹೆಚ್ಚು ತಂಬಾಕು ಸಂಬAಧಿತ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿವೆ. ತಂಬಾಕು ಸಂಬAಧಿತ ಕ್ಯಾನ್ಸರ್ ಪ್ರಕರಣಗಳಲ್ಲಿ ಹೆಚ್ಚಿನ ರೋಗಿಗಳು ರೋಗದ ಉಲ್ಬಣಾವಸ್ಥೆಯಲ್ಲಿ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚಿಕಿತ್ಸೆಯು ಕಷ್ಟಕರ ಮತ್ತು ಹೆಚ್ಚು ಫಲದಾಯಕವಾಗುವುದಿಲ್ಲ .
ತಂಬಾಕು ಸಂಬAಧಿತ ಕ್ಯಾನ್ಸರ್‌ಗಳು/ ಇತರೆ ರೋಗಗಳು ಪ್ರಾಥಮಿಕವಾಗಿ ತಡೆಗಟ್ಟಬಹುದು ಎಂಬುದು ತಿಳಿದ ವಿಷಯವೇ. ಆದರೆ ತಂಬಾಕು ಸೇವನೆಯಿಂದ ಉಂಟಾಗುವ ಕ್ಯಾನ್ಸರ್ ಕಾಯಿಲೆಗಳ ನಿಯಂತ್ರಣಕ್ಕಾಗಿ ಕಾರ್ಯನೀತಿಗಳು ಮತ್ತು ಕಾರ್ಯತಂತ್ರಗಳ ರೂಪದಲ್ಲಿ ಯೋಜಿತ ಪ್ರಯತ್ನಗಳು ಆಗಬೇಕಾದುದು ಇಂದಿನ ತುರ್ತು ಅವಶ್ಯಕತೆಯಾಗಿದೆ.
ತೆರಿಗೆ ಹೇರಿಕೆ, ಜಾಹೀರಾತು ನಿಷೇಧ, ಹೊಗೆ ಮುಕ್ತಗೊಳಿಸಲು ಕಾರ್ಯನೀತಿಗಳು ಮತ್ತು ತಂಬಾಕು ಉದ್ಯಮದ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧದ ರಕ್ಷಣೆ ಸೇರಿದಂತೆ ಹೆಚ್ಚುತ್ತಿರುವ ಪರಿಣಾಮಕಾರಿ ತಂಬಾಕು ನಿಯಂತ್ರಣ ನೀತಿಗಳ ಅನುಷ್ಠಾನವನ್ನು ಬೆಂಬಲಿಸಲು ವಿಶ್ವ ಆರೋಗ್ಯ ಸಂಸ್ಥೆಯು ಒಂದು ಪಾರಂಪರಿಕ ಕಾರ್ಯಚೌಕಟ್ಟಿನೊಳಗೆ ವಿವರವಾದ ಮಾರ್ಗದರ್ಶನವನ್ನು ನೀಡುತ್ತಿದೆ. ಆದರೆ, ವಿಶ್ವದ ಹೆಚ್ಚಿನ ಭಾಗಗಳಲ್ಲಿ, ಈ ಮಾರ್ಗದರ್ಶೀ ಸೂತ್ರಗಳನ್ನು ಪರಿಣಾಮಕಾರೀ ಶಾಸನಗಳನ್ನಾಗಿ ರೂಪಿಸುವುದು ಬಹಳ ದೂರವೇ ಉಳಿದಿದೆ.
ಕಿದ್ವಾಯಿ ನಡಿಗೆ ಗ್ರಾಮಗಳ ಕಡೆಗೆ:
ಇನ್ನು, ಕಿದ್ವಾಯಿ ಸ್ಮಾರಕ ಸಂಸ್ಥೆಯು ತನ್ನ ಸಮುದಾಯ ಗಂಥಿಶಾಸ್ತ್ರ ವಿಭಾಗದ ಮೂಲಕ ಜನಜಾಗೃತಿ ಕಾರ್ಯಕ್ರಮಗಳನ್ನು ಸಕ್ರಿಯವಾಗಿ ನಡೆಸುತ್ತಿದೆ. ‘ಕಿದ್ವಾಯಿ ನಡಿಗೆ ಗ್ರಾಮಗಳ ಕಡೆಗೆ’ ಎಂಬ ಘೋಷವಾಕ್ಯದೊಂದಿಗೆ ಸಂಸ್ಥೆಯು ರಾಜ್ಯದ ವಿವಿಧ ಭಾಗಗಳಲ್ಲಿ ಮಾಸಿಕ ಸರಾಸರಿ 6-7 ಕ್ಯಾನ್ಸರ್ ಪತ್ತೆ ಶಿಬಿರಗಳನ್ನು ನಡೆಸುತ್ತಿದೆ. ಈ ಶಿಬಿರಗಳಲ್ಲಿ ಮೂರು ಪ್ರಮುಖ ಕ್ಯಾನ್ಸರ್ ರೋಗಗಳಾದ ಗರ್ಭಗೊರಳಿನ ಕ್ಯಾನ್ಸರ್, ಸ್ತನಕ್ಯಾನ್ಸರ್ ಮತ್ತು ಬಾಯಿ ಕ್ಯಾನ್ಸರ್ ಇವುಗಳ ತಡೆಗಟ್ಟುವಿಕೆ ಮತ್ತು ಆರಂಭಿಕಪತ್ತೆ ಕುರಿತಾದ ಜನಜಾಗೃತಿಗಾಗಿ ನಮ್ಮ ಸಂಸ್ಥೆಯ ತಜ್ಞರಿಂದ ಉಪನ್ಯಾಸಗಳನ್ನು ನಡೆಸಲಾಗುತ್ತಿದೆ.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಭಾರತದಲ್ಲಿನ ಪ್ರಮುಖ ಪ್ರಾದೇಶಿಕ ಕ್ಯಾನ್ಸರ್ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಆಸ್ಪತ್ರೆಗೆ ರೋಗಿಗಳು ಚಿಕಿತ್ಸೆಗಾಗಿ ಕರ್ನಾಟಕದಿಂದ ಮಾತ್ರವಲ್ಲದೆ ನೆರೆಯ ರಾಜ್ಯಗಳು ಮತ್ತು ನೆರೆಯ ರಾಷ್ಟ್ರಗಳಾದ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ ಮತ್ತು ಪಾಕಿಸ್ತಾನದಿಂದಲೂ ರೋಗನಿರ್ಣಯಕ್ಕಾಗಿ ಮತ್ತು ಚಿಕಿತ್ಸಾ ಉದ್ದೇಶಗಳಿಗಾಗಿ ಬರುತ್ತಿದ್ದಾರೆ. ಪುರುಷರಲ್ಲಿ ಚಿಕಿತ್ಸೆಗಾಗಿ ಬಂದ ರೋಗಿಗಳಲ್ಲಿ ಹೆಚ್ಚಿನವರು ತಂಬಾಕು ಸಂಬAಧಿತ ಕ್ಯಾನ್ಸರ್‌ಗಳಿಗೆ ಸಂಬAಧಿಸಿದವರು ಎಂದು ಗಮನಿಸಲಾಗಿದೆ.
ಅಂಕಿಅAಶಗಳು:
ಭಾರತದಲ್ಲಿ ತಂಬಾಕು ಸಂಬAಧಿತ ಕ್ಯಾನ್ಸರ್
ಪ್ರದೇಶಗಳು ಕ್ಯಾನ್ಸರ್ ಟಿಆರ್‌ಸಿ ಶೇಕಡಾವಾರು
ಉತ್ತರ 71568 24654 34.4
ಪೂರ್ವ 19337 3020 15.6
ಪಶ್ಚಿಮ 113388 20382 18.0
ದಕ್ಷಿಣ 119459 33480 28.0
ಕೆ?ಂದ್ರ 24081 7398 30.7
ಈಶಾನ್ಯ 79691 14161 17.8
ಕರ್ನಾಟಕದಲ್ಲಿ ಅಂದಾಜು ತಂಬಾಕು ಸಂಬAಧಿತ ಕ್ಯಾನ್ಸರ್ (2021):
ಎಲ್ಲಾ ರೀತಿಯ ಕ್ಯಾನ್ಸರ್‌ಗಳು ಪ್ರಚಲಿತದಲ್ಲಿರುವ ಸಂಖ್ಯೆ ತAಬಾಕು ಸಂಬAಧಿತ ಕ್ಯಾನ್ಸರ್ ಸಂಭವ ತAಬಾಕು ಸಂಬAಧಿತ ಕ್ಯಾನ್ಸರ್ ಪ್ರಚಲಿತದಲ್ಲಿರುವ ಸಂಖ್ಯೆ
ಒಟ್ಟು 87304 235719 20935 (24%) 56524
ಪುರುಷರು 37749 101921 13800 (34.3%) 37260
ಮಹಿಳೆಯರು 49555 133798 7135 (14.3%) 19265
ಬೆಂಗಳೂರಿನಲ್ಲಿ ತಂಬಾಕು ಸಂಬAಧಿತ ಕ್ಯಾನ್ಸರ್ ಪ್ರಕರಣಗಳು (2021)
ಎಲ್ಲಾ ಕ್ಯಾನ್ಸರ್- ಪುರುಷರು ಮತ್ತು ಮಹಿಳೆಯರು 15827 3821 (24.1%) 121.2 29
ಎಲ್ಲಾ ಕ್ಯಾನ್ಸರ್ – ಪುರುಷರು 6868 2569 (37.4%) 103.2 38
ಎಲ್ಲಾ ಕ್ಯಾನ್ಸರ್- ಮಹಿಳೆಯರು 8959 1252(14.0%) 139.2 20