ಏಕದಿನ ವಿಶ್ವಕಪ್​: ಭಾರತ-ಪಾಕಿಸ್ತಾನ ನಡುವೆ ಪಂದ್ಯಕ್ಕೆ ದಿನಾಂಕ ನಿಗದಿ

ಈ ವರ್ಷ  ನಡೆಯಲಿರುವ ಏಕದಿನ ವಿಶ್ವಕಪ್​ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿದೆ. 

ಎರಡೂ ಬದ್ಧವೈರಿ ರಾಷ್ಟ್ರಗಳ ನಡುವಿನ ಕದನಕ್ಕೆ ದಿನಾಂಕ ನಿಗದಿಯಾಗಿದೆ. ಅಕ್ಟೋಬರ್​ 15ರಂದು ಭಾನುವಾರ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಎರಡೂ ತಂಡಗಳು ಕಾದಾಡಲಿವೆ.

1992, 1996, 1999, 2003, 2011, 2015 ಮತ್ತು 2019ರ ಹೀಗೆ ಎಂಟು ವಿಶ್ವಕಪ್​ಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದೆ.

ಈ ಎಂಟು ಪಂದ್ಯಗಳಲ್ಲಿ 7 ಬಾರಿ ಭಾರತವೇ ಗೆದ್ದಿದೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 1,32,000 ವೀಕ್ಷಕರ ಆಸನಕ್ಕೆ ಅವಕಾಶವಿದೆ. ಅಕ್ಟೋಬರ್​ 5ರಂದು ವಿಶ್ವಕಪ್​ನ ಉದ್ಘಾಟನೆ ಪಂದ್ಯ ಮತ್ತು ನವೆಂಬರ್​ 19ರಂದು ಫೈನಲ್​ ಪಂದ್ಯ ಕೂಡಾ ಇದೇ ಸ್ಟೇಡಿಯಂನಲ್ಲಿ ನಡೆಯಲಿದೆ.