ಹೊಸ ಸಂಸತ್ ಭವನದಲ್ಲಿ ನೆಲಹಾಸು (Carpet)ಗಾಗಿ ನ್ಯೂಜಿಲ್ಯಾಂಡ್ನಿಂದ ಉಣ್ಣೆಯನ್ನು ಆಮದು ಮಾಡಿಕೊಳ್ಳಲಾಗಿತ್ತು ಎಂದು ಪ್ರಮುಖ ಇಂಗ್ಲೀಷ್ ದೈನಿಕ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ನ್ಯೂಜಿಲೆಂಡ್ನ ದಕ್ಷಿಣ ಮತ್ತು ಉತ್ತರ ಭಾಗದಿಂದ 20 ಸಾವಿರ ಕೆಜಿಯಷ್ಟು ಉಣ್ಣೆಯನ್ನು ಆಮದು ಮಾಡಿಕೊಳ್ಳಲಾಗಿತ್ತು.
ಆಮದು ಮಾಡಿಕೊಳ್ಳಲಾದ ಉಣ್ಣೆಯನ್ನು 314 ಕೈ ಮಗ್ಗಗಳಲ್ಲಿ 900 ಮಂದಿ ನೇಕಾರರು ನೆಲಹಾಸಿನ ರೂಪ ಕೊಟ್ಟರು.
ಲೋಕಸಭೆ, ರಾಜ್ಯಸಭೆ ಮತ್ತು ಮಾಧ್ಯಮದವರ ಗ್ಯಾಲರಿಗೆ ಬೇರೆ ಬೇರೆ ಬಣ್ಣದ, ಬೇರೆ ಬೇರೆ ವಿನ್ಯಾಸದ ನೆಲಹಾಸನ್ನು ಸಿದ್ಧಪಡಿಸಲಾಯಿತು.
ADVERTISEMENT
ADVERTISEMENT