ಭಾರತದ ಅತಿದೊಡ್ಡ ಅಮ್ಯೂಸ್ಮೆಂಟ್ ಪಾರ್ಕ್ ಖ್ಯಾತಿಯ ‘ವಂಡರ್ ಲಾ’ (Wonderla Offer) ಗಣೇಶ ಹಬ್ಬದ ಪ್ರಯುಕ್ತ ಗಣೇಶ ಹೆಸರು ಹೊಂದಿರುವ ಗ್ರಾಹಕರಿಗೆ ಉಚಿತ ಕೊಡುಗೆ ಘೋಷಿಸಿದೆ.
ಗಣೇಶ ಹಬ್ಬದ ಪ್ರಯುಕ್ತ ವಂಡರ್ಲಾ ಈ ಆಫರ್(Wonderla Offer) ಘೋಷಿಸಿದೆ. ಗಣೇಶನ 108 ಹೆಸರುಗಳಲ್ಲಿ ನಿಮ್ಮ ಹೆಸರೂ ಒಂದಾಗಿದ್ದರೆ ನೀವು ಈ ಸೌಲಭ್ಯ ಪಡೆದುಕೊಳ್ಳಬಹುದು.
ಇದನ್ನೂ ಓದಿ : ಅನ್ ಲಾಕ್ 3.0: ಜುಲೈ 5 ರಿಂದ ವಂಡರ್ ಲಾ ಪ್ರಾರಂಭ
ಗಣೇಶನ 108 ಹೆಸರುಗಳಲ್ಲಿನ ಒಂದು ಹೆಸರನ್ನು ಹೊಂದಿರುವ 100 ಜನರಿಗೆ ವಂಡರ್ಲಾ ಉಚಿತ ಪ್ರವೇಶ ನೀಡಲಿದೆ. ಇದಕ್ಕಾಗಿ ಬೆಂಗಳುರು, ಹೈದರಾಬಾದ್, ಕೊಚ್ಚಿ ವಂಡರ್ಲಾಗಳಲ್ಲಿ ಆಪ್ಲೈನ್ ಬುಕಿಂಗ್ ಮಾಡಿಕೊಳ್ಳಬೇಕಿದೆ.
ಈ ಆಫರ್ ಪಡೆಯಲು ಬಯಸುವವರು ತಮ್ಮ ಒಂದು ಗುರುತಿನ ಚೀಟಿ ತೆಗೆದುಕೊಂಡು ವಂಡರ್ಲಾ ಗೆ ಭೇಟಿ ನೀಡಿ ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ 080-37230333 ನಂಬರ್ಗೆ ಸಂಪರ್ಕಿಸಬಹುದಾಗಿದೆ.