ADVERTISEMENT
ರಾಜ್ಯ ಬಿಜೆಪಿ ಸರ್ಕಾರದಲ್ಲಿ (BJP) ಸರ್ಕಾರಿ ಹುದ್ದೆ ಬೇಕಾದರೆ ಪರೀಕ್ಷೆ ಬರೆದ ಯುವತಿಯರು ಯಾರೊಂದಿಗಾದರೂ ಮಲಗಬೇಕಾದ ಪರಿಸ್ಥಿತಿ ಇದೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ (Priyank Kharge) ಗಂಭೀರ ಆರೋಪ ಮಾಡಿದ್ದಾರೆ.
ಈ ಮೂಲಕ ಬಿಜೆಪಿ ಸರ್ಕಾರ ವಿರುದ್ಧ ಕೇಳಿಬಂದಿರುವ ನೇಮಕಾತಿ ಹಗರಣದ ಆರೋಪಕ್ಕೆ ಹೊಸ ತಿರುವು ಸಿಕ್ಕಿದೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಿಯಾಂಕ್ಖರ್ಗೆ ಅವರು,
ನೌಕರಿಗಾಗಿ ಯುವಕರು ಲಂಚ ನೀಡಬೇಕಿದ್ದು, ಯುವತಿಯರು ಯಾರೊಂದಿಗಾದರೂ ಮಲಗಬೇಕಾದ ಪರಿಸ್ಥಿತಿ ಇದೆ. ಇದು ಲಂಚ ಮತ್ತು ಮಂಚದ ಸರ್ಕಾರ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಕೆಪಿಟಿಸಿಎಲ್ನಲ್ಲಿ 1,492 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಸ್ಮಾರ್ಟ್ ವಾಚ್ ಬಳಸಿ ಪರೀಕ್ಷೆ ಬರೆದ ಓರ್ವನನ್ನು ಈಗಾಗಲೇ ಗೋಕಾಕ್ನಲ್ಲಿ ಬಂಧಿಸಲಾಗಿದೆ.
ನಮಗಿರುವ ಮಾಹಿತಿ ಪ್ರಕಾರ 600 ಹುದ್ದೆಗಳಿಗೆ ಡೀಲ್ ಮಾಡಿಕೊಳ್ಳಲಾಗಿದೆ. 300 ಕೋಟಿ ರೂಪಾಯಿ ವ್ಯವಹಾರ ಆಗಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ನ್ಯಾಯಾಂಗ ತನಿಖೆ ಆಗ್ಬೇಕು
ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ADVERTISEMENT