ಚಳಿಗಾಲದಲ್ಲಿ ಇದನ್ನು ತಪ್ಪದೇ ಮಾಡಿ..!

ಚಳಿಗಾಲ ಈಗ ಶುರುವಾಗಿದ್ದು, ಬೆಳಿಗ್ಗೆ ಏಳುವುದೇ ಕಷ್ಟವೆನಿಸುವಷ್ಟು ಚುಮು-ಚುಮು ಚಳಿ, ಬೆಚ್ಚಗೆ ಮತ್ತೆ ಬೆಡ್- ಶೀಟ್ ಹೊದ್ದುಕೊಂಡು ಮಲಗೋ ಆಸೆ! ದಿನನಿತ್ಯದ ಕೆಲಸಗಳನ್ನು ಮುಗಿಸುವುದಕ್ಕೂ ಆಲಸ್ಯತನ. ಹಾಗಂತ ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸದಿರಿ!

ಚಳಿಗಾಲವೇ ಹಾಗೆ ನೋಡಿ, ಬೆಂಗಳೂರಿನಲ್ಲಿ ಶೀತ ಗಾಳಿ ಹೆಚ್ಚಾಗಿದ್ದು ದಾಖಲೆಯ ಮಟ್ಟದಲ್ಲಿ ಚಳಿ ನಡುಗಿಸುತ್ತಿದೆ. ಚಳಿಗಾಲ ಶುರುವಾದಂತೆ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ಕೂಡ ಕಾಡುತ್ತವೆ. ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಿಬೇಕು.

ಚಳಿಗಾಲದಲ್ಲಿ ವಾತಾವರಣ ವೈಪರೀತ್ಯದಿಂದಾಗಿ ದೇಹದಲ್ಲಿ ಬ್ಯಾಕ್ಟೀರಿಯಾ ವೈರಸ್ ಬೆಳವಣಿಗೆಯಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಚಳಿಗಾಲದಲ್ಲಿ ಸೋಂಕುಗಳು ಬೇಗ ಹರಡುತ್ತೆ. ಚಳಿಗಾಲದಲ್ಲಿ ಏನೆಲ್ಲ ಆರೋಗ್ಯ ಸಮಸ್ಯೆ ಕಾಡುತ್ತೆ, ಯಾವೆಲ್ಲ ರೀತಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಬೇಕು, ಯಾವ ರೀತಿಯ ಆಹಾರ ತಗೋಬೇಕು, ಹೆಲ್ತ್ ಟಿಪ್ಸ್ ಇಲ್ಲಿದೆ.

ಚಳಿಗಾಲದ ಕಾಯಿಲೆಗಳು-

* ಶೀತ, ಕೆಮ್ಮು, ಜ್ವರ ಸಾಮಾನ್ಯವಾಗಿ ಕಂಡು ಬರುವಂತಹ ರೋಗಗಳು
* ಶ್ವಾಸಕೋಶ ಸಂಬಂಧಿ ಕಾಯಿಲೆ ಹೆಚ್ಚಾಗುತ್ತೆ. ಉದಾ: ಅಸ್ತಮಾ, ಉಸಿರಾಟದ ಸಮಸ್ಯೆ
* ೪೦-೫೦ ವಯಸ್ಸಿನ ಅಸುಪಾಸಿನಲ್ಲಿರುವವರಿಗೆ ಪಾದದ ಗಂಟಿನಲ್ಲಿ ನೋವು, ಮಂಡಿನೋವು ಚಳಿಗಾಲದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ.
* ಚರ್ಮಶುಷ್ಕವಾಗುತ್ತೆ ಹಾಗೂ ಚರ್ಮ ಸಂಬಂಧಿ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಉದಾ: ಹಿಮ್ಮಡಿ ಬಿರುಕು ಬಿಡುವುದು, ತುರಿಕೆ ಇತ್ಯಾದಿ
* ಚಳಿಗಾಲದಲ್ಲಿ ಹೃದಯ ಸಂಬಂಧಿ ಕಾಯಿಲೆಯುಳ್ಳವರು ಎಚ್ಚರ ವಹಿಸುವುದು ಅತೀ ಮುಖ್ಯ. ಚಳಿಗಾಲದ ರಾತ್ರಿಗಳಲ್ಲಿ ತಾಪಮಾನ ಕಡಿಮೆ ಇರುವುದರಿಂದ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ರಕ್ತದೊತ್ತಡ ಹಾಗೂ ಪ್ರೋಟಿನ್ ಪ್ರಮಾಣ ಹೆಚ್ಚಾಗಿ ರಕ್ತ ಹೆಪ್ಪುಗಟ್ಟಬಹುದು. ಇದರಿಂದ ರಕ್ತ ಸಂಚಾರಕ್ಕೆ ತೊಂದರೆಯಾಗಿ ಹೃದಯಕ್ಕೆ ಸಾಕಷ್ಟು ಆಮ್ಲಜನಕ ದೊರೆಯದೇ ಹೃದಯಾಘಾತವಾಗುವ ಸಾಧ್ಯತೆ ಅಧಿಕ.
*ಹುಳುಕು ಹಲ್ಲಿನ ಸಮಸ್ಯೆಗಳಿದ್ದವರಲ್ಲಿ ರಾತ್ರಿ ಆಗಾಗ ನೋವು ಕಾಣಿಸಿಕೊಳ್ಳುವುದು
*ಸಕ್ಕರೆ ಖಾಯಿಲೆ/ ಮಧುಮೇಹ ಇದ್ದವರಿಗೆ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು

ಹಾಗಾದರೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ?

* ಜ್ವರ, ಶೀತ, ನೆಗಡಿ, ಕೆಮ್ಮು ಕಾಣಿಸಿಕೊಂಡಾಗ ನಿರ್ಲಕ್ಷ್ಯ ಮಾಡದೇ ಆರಂಭಿಕ ಹಂತದಲ್ಲೇ ವೈದ್ಯರನ್ನು ಭೇಟಿಯಾಗಿ
* ಸಾಧ್ಯವಾದಷ್ಟು ಬೆಚ್ಚಗಿರುವ ಬಟ್ಟೆಗಳನ್ನು ಬಳಸಿ (ಹತ್ತಿಯ ಬಟ್ಟೆಯನ್ನು ಧರಿಸುವುದು ಸೂಕ್ತ)
* ಸಾಕಷ್ಟು ಹಣ್ಣುಗಳನ್ನು ತಿನ್ನಿ
* ಸಾಧ್ಯವಾಷ್ಟು ಬಿಸಿ ಬಿಸಿ ಇರುವ ಊಟ, ತಿಂಡಿಯನ್ನು ಮಾಡಿ.
* ಚರ್ಮದ ಸಮಸ್ಯೆ ಹೆಚ್ಚಾಗಿ ಕಾಣಿಸೋದ್ರಿಂದ ಕೊಬ್ಬರಿ ಎಣ್ಣೆಯನ್ನು ಅಥವಾ ಮಾಯಿಶ್ಚರ್‌ ಕ್ರೀಮ್ ಗಳನ್ನು ಮೈ ಕೈಗೆ ಹಚ್ಚಿಕೊಳ್ಳಿ.
* ಶುಂಠಿ, ಬೆಳ್ಳುಳ್ಳಿ, ಚಕ್ಕೆ ಲವಂಗ ಕರಿಮೆಣಸಿನ ಬಳಕೆ ಆಹಾರ ಪದಾರ್ಥದಲ್ಲಿ ಹೆಚ್ಚಿರಲಿ.
* ಬಿಸಿ ನೀರನ್ನು ಸೇವಿಸಿ. ಕರಿದ ತಿಂಡಿಗಳನ್ನು ಸಾಧ್ಯವಾದಷ್ಟು ಕಡಿಮೆ ಸೇವಿಸಿ.                                                      * ಸರಳ ಯೋಗ- ವ್ಯಾಯಾಮ ಮಾಡುವುದು
*ಒತ್ತಡದ ನಿರ್ವಹಣೆ ( ಜಾಸ್ತಿ ಒತ್ತಡ ಕೆಲವೊಮ್ಮೆ ನಿಮ್ಮ ದೇಹದ ಪ್ರತಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ) ಸಾಕಷ್ಟು ನಿದ್ದೆ ಮಾಡುವುದರಿಂದ ಒತ್ತಡದ ಸಮಸ್ಯೆಯಿಂದ ಹೊರಬರಬಹುದು

ಎಲ್ಲಾ ವಯಸ್ಸಿನವರೂ ಕೂಡ ಚಳಿಗಾಲದಲ್ಲಿ ಆರೋಗ್ಯದ ಕಾಳಜಿ ವಹಿಸಬೇಕು, ಅದರಲ್ಲೂ ಮುಖ್ಯವಾಗಿ ವಯೋವೃದ್ಧರು ತಮ್ಮ ಅರೋಗ್ಯದ ಕಡೆ ಹೆಚ್ಚು ಕಾಳಜಿ ವಹಿಸಬೇಕು

LEAVE A REPLY

Please enter your comment!
Please enter your name here