ಬಾಂಗ್ಲಾ ದೇಶ ವಿರುದ್ಧದ ಎರಡನೇ ಟೆಸ್ಟ್ ನಲ್ಲೂ ವೆಸ್ಟ್ ಇಂಡೀಸ್ 10 ವಿಕೆಟ್‌ಗಳ ಪ್ರಚಂಡ ಜಯ ಸಾಧಿಸಿದೆ.
ಈ ಮೂಲಕ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಕೆರೆಬಿಯನ್ನರು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದ್ದಾರೆ.
ಎರಡೂ ಟೆಸ್ಟ್ ಪಂದ್ಯಗಳನ್ನು ವಿಂಡೀಸ್ ನಾಲ್ಕು ನಾಲ್ಕು ದಿನಗಳ ಅಂತರದಲ್ಲೇ ಗೆದ್ದಿರುವುದು ವಿಶೇಷ. ಇದು ಬಾಂಗ್ಲಾ ದೇಶದ 100ನೇ ಟೆಸ್ಟ್ ಸೋಲು
ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ ನಲ್ಲಿ 234 ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ 186 ರನ್ ಗಳಿಸಿತ್ತು.
ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ ನಲ್ಲಿ 408 ರನ್ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೇ 13 ರನ್ ಗಳಿಸಿತ್ತು.
ವಿಂಡೀಸ್ ಪರ ಮೇರ್ಸ್ 146 ರನ್, ಬ್ರಾಥ್‌ವೈಟ್ 51 ರನ್ ಗಳಿಸಿದರು. ಬಾಂಗ್ಲಾ ಪರ ಲಿಟ್ಟನ್ 53, ನುರುಲ್ 60 ರನ್ ಗಳಿಸಿದರು.
ಬಾಂಗ್ಲಾ ಪರ ಖಾಲಿದ್ 106 ರನ್‌ಗೆ 5 ವಿಕೆಟ್, ವಿಂಡೀಸ್ ಪರ ಸೀಲ್ಸ್ 21 ರನ್‌ಗೆ 3 ವಿಕೆಟ್, ರೋಚ್ 54 ರನ್‌ಗೆ 3 ವಿಕೆಟ್, ಜೋಸೆಫ್ 57 ರನ್‌ಗೆ 3 ವಿಕೆಟ್ ಪಡೆದರು.