ರಾಜೀನಾಮೆ ಪತ್ರ ಹರಿದು ಹಾಕಿದ ಬೆಂಬಲಿಗರು – ರಾಜೀನಾಮೆ ಕೊಡಲ್ಲ ಎಂದ CM -ರಾಜೀನಾಮೆ ನಾಟಕಕ್ಕೆ ತೆರೆ

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ ಎಂದು ಮಣಿಪುರ ಮುಖ್ಯಮಂತ್ರಿ ಬಿರೇನ್​ ಸಿಂಗ್ ಹೇಳಿದ್ದಾರೆ. ಈ ಮೂಲಕ ರಾಜೀನಾಮೆ ನಾಟಕಕ್ಕೆ ತೆರೆಬಿದ್ದಿದೆ.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲು ಬಿರೇನ್​ ಸಿಂಗ್​ ಅವರು ರಾಜಭವನಕ್ಕೆ ತೆರಳಿದ್ದರು.

ಆದರೆ ರಾಜೀನಾಮೆಗೆ ಪ್ರತಿರೋಧಿಸಿದ ಅವರ ಬೆಂಬಲಿಗರು ರಾಜೀನಾಮೆ ಪತ್ರವನ್ನು ಹರಿದುಹಾಕಿದರು.

ಆ ಬಳಿಕ ಟ್ವೀಟ್​ ಮಾಡಿರುವ ಬಿರೇನ್​ ಸಿಂಗ್​ ಇಂತಹ ಸನ್ನಿವೇಶದಲ್ಲಿ ನಾನು ರಾಜೀನಾಮೆ ಕೊಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮೂಲಗಳ ಪ್ರಕಾರ ಬಿರೇನ್​ ಸಿಂಗ್​ ಇವತ್ತು ರಾಜೀನಾಮೆ ನೀಡಬೇಕಿತ್ತು. ಜೂನ್​ 25ರಂದು ಬಿರೇನ್​ ಸಿಂಗ್​ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರನ್ನು ಭೇಟಿಯಾಗಿದ್ದರು.