ಟೀಂ ಇಂಡಿಯಾ ಆಟಗಾರರಾದ ಹಾರ್ದಿಕ್ ಪಾಂಡ್ಯಾ ಮತ್ತು ಮುನಾಫ್ ಪಟೀಲ್ ವಿರುದ್ಧ ಅತ್ಯಾಚಾರದ ದೂರು ಸಲ್ಲಿಕೆ ಆಗಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ರಿಯಾಜ್ ಭಟಿ ಪತ್ನಿ ಈ ಆರೋಪ ಮಾಡಿದ್ದಾಳೆ.
ಕ್ರಿಕೆಟ್ ಆಟಗಾರರು ಮಾತ್ರವಲ್ಲದೇ ಬಿಸಿಸಿಐ ಉಪಾಧ್ಯಕ್ಷರೂ ಆಗಿರುವ ರಾಜೀವ್ ಶುಕ್ಲಾ ಮತ್ತು ಉದ್ಯಮಿ ಪೃಥ್ವಿರಾಜ್ ಕೊಥಾರಿ ವಿರುದ್ಧ ಭಟಿ ಪತ್ನಿ ಅತ್ಯಾಚಾರದ ದೂರು ಸಲ್ಲಿಸಿದ್ದಾಳೆ. ಗಂಡ ರಿಯಾಜ್ ಭಟಿ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಾಳೆ.
ಇಂಗ್ಲೀಷ್ ವೆಬ್ಸೈಟ್ ದಿ ಪ್ರಿಂಟ್ ಮಾಡಿರುವ ವರದಿ ಪ್ರಕಾರ, ಸೆಪ್ಟೆಂಬರ್ 24, 2021ರಂದು ರಿಯಾಜ್ ಭಟಿ ಪತ್ನಿ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾಳೆ. ಆದರೆ ಘಟನೆ ಯಾವಾಗ ಆಯಿತು, ಎಲ್ಲಿ ಆಯಿತು ಎಂಬ ಮಾಹಿತಿಯನ್ನು ಆಕೆ ದೂರಿನಲ್ಲಿ ವಿವರಿಸಿಲ್ಲ ಎಂದು ದಿ ಪ್ರಿಂಟ್ ವರದಿ ಮಾಡಿದೆ.
`ಸೆಪ್ಟೆಂಬರ್ನಲ್ಲೇ ದೂರು ನೀಡಿದ್ದರೂ ನವೆಂಬರ್ ಆಗುತ್ತಾ ಬಂದರೂ ಮುಂಬೈ ಪೊಲೀಸರು ಕ್ರಮಕೈಗೊಂಡಿಲ್ಲ, ಎಫ್ಐಆರ್ ದಾಖಲಿಸಿಲ್ಲ. ನನ್ನ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ನಾನು ಯಾಕೆ ಹಣ ಕೊಡಲಿ’ ಎಂದು ಆಕೆ ಪ್ರಶ್ನಿಸಿದ್ದಾಳೆ ಎಂದು ಆಕೆ ಪ್ರತಿಕ್ರಿಯೆ ನೀಡಿದ್ದಾಳೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ತನ್ನ ಗಂಡ ರಿಯಾಜ್ ಭಟ್ಟಿ ತನ್ನ ಸ್ನೇಹಿತರೊಂದಿಗೆ ಲೈಂಗಿಕ ಸಂಪರ್ಕ ಹೊಂದುವAತೆ ಬಲವಂತ ಮಾಡುತ್ತಿದ್ದ. 2011-2012ರ ನಡುವೆ ಕೊಥಾರಿ ಜೊತೆಗೆ ಲೈಂಗಿಕ ಸಂಪರ್ಕ ಹೊಂದುವAತೆ ಬಲವಂತ ಮಾಡಿದ್ದ. 2014-15ರಲ್ಲಿ ಮುನಾಫ್ ಪಟೇಲ್ ಜೊತೆಗೆ, ಪಾಂಡ್ಯಾ ಮತ್ತು ಆತನ ಇಬ್ಬರು ಸ್ನೇಹಿತರ ಜೊತೆಗೆ ದೈಹಿಕ ಸಂಪರ್ಕ ಹೊಂದಲು ಬಲವಂತ ಮಾಡಿದ್ದ. ಪಾಂಡ್ಯಾ ಮತ್ತು ಆತನ ಸ್ನೇಹಿತರು ಮದ್ಯ ಮತ್ತು ಡ್ರಗ್ಸ್ ನಶೆಯಲ್ಲಿ ತನ್ನೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದರು’ ಎಂದು ಆಕೆ ದೂರಿನಲ್ಲಿ ಆರೋಪಿಸಿದ್ದಾಳೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.