ಪ್ರಧಾನಿ ಸ್ಥಾನಕ್ಕೆ ಮೊದಲ ಆಯ್ಕೆ ಯಾರು – ಸಮೀಕ್ಷೆಯ ಅಂತಿಮ ಫಲಿತಾಂಶ

2024ರಲ್ಲಿ ಭಾರತದ ಪ್ರಧಾನಿ ಯಾರಾಗ್ಬೇಕು ಎಂದು ಕೇಳಿ ಸಾಮಾಜಿಕ ಜಾಲತಾಣ ಟ್ವಿಟ್ಟರ್​ನಲ್ಲಿ ಬಿಜೆಪಿ ಪರ ಸುದ್ದಿವಾಹಿನಿ ಸುದರ್ಶನ ಟಿವಿ ಮಾಲೀಕ ಸುರೇಶ್​ ಚವ್ಹಾಣ್​ ಕೈಗೊಂಡಿದ್ದ ಸಮೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗಿದೆ.
7 ದಿನಗಳ ಸಮೀಕ್ಷೆಯಲ್ಲಿ ಈ ಸಮೀಕ್ಷೆ 16 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಆಗಿದೆ. ಈ ವೇಳೆ 215,549 ಮಂದಿ ತಮ್ಮ ಮತ ಚಲಾಯಿಸಿದ್ದಾರೆ.
ಸಮೀಕ್ಷೆಯಲ್ಲಿ ನೀಡಲಾದ ಆಯ್ಕೆಗಳು ಮತ್ತು ಸಿಕ್ಕ ಶೇಕಡಾವಾರು ಮತ:
2024ರಲ್ಲಿ ನೀವು ಯಾರನ್ನು ಪ್ರಧಾನಿಯಾಗಿ ಕಾಣಲು ಬಯಸುತ್ತೀರಿ..?
1. ನರೇಂದ್ರ ಮೋದಿ – ಶೇಕಡಾ 44.6
2. ರಾಹುಲ್​ ಗಾಂಧಿ – ಶೇಕಡಾ 51.8
3. ನಿತೀಶ್​ ಕುಮಾರ್​ – ಶೇಕಡಾ 2.2
4. ಮಮತಾ ಬ್ಯಾನರ್ಜಿ : ಶೇಕಡಾ 1.5
ಈ ಸಮೀಕ್ಷೆಯ ಇನ್ನೊಂದು ಭಾಗದಲ್ಲಿ ಮತ್ತೆ ನಾಲ್ಕು ಆಯ್ಕೆಗಳನ್ನು ಮುಂದಿಟ್ಟು ಇದೇ ಪ್ರಶ್ನೆಗಳನ್ನು ಕೇಳಲಾಯಿತು. ಈ ಭಾಗದಲ್ಲಿ 44,636 ಮಂದಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇವರಲ್ಲಿ
1. ಅರವಿಂದ್​ ಕೇಜ್ರಿವಾಲ್​ – ಶೇಕಡಾ 41.6
2. ಕೆ ಚಂದ್ರಶೇಖರ್​ ರಾವ್​ – ಶೇಕಡಾ 11.6
3. ಇತರೆ ಯಾರಾದರೂ – ಶೇಕಡಾ 32.3
4. ಯಾರಾದರೂ ಸರಿ – ಶೇಕಡಾ 14.6
ಬಿಜೆಪಿ ಪರ ಇರುವ ಟಿವಿ ಚಾನೆಲ್​ನ ಮಾಲೀಕರು ಕೈಗೊಂಡಿರುವ ಈ ಸಮೀಕ್ಷೆಯಲ್ಲಿ ರಾಹುಲ್​ ಗಾಂಧಿ ಅವರೇ ಪ್ರಧಾನಿ ಸ್ಥಾನಕ್ಕೆ ಮೊದಲ ಆಯ್ಕೆ ಎಂದು ಅತ್ಯಧಿಕ ಮಂದಿ ಅಭಿಪ್ರಾಯ ತಿಳಿಸಿರುವುದು ವಿಶೇಷ.

LEAVE A REPLY

Please enter your comment!
Please enter your name here