ನೇಪಾಳ ಸರ್ಕಾರದಲ್ಲಿ ಉನ್ನತ ಪದವಿಗಳೆಲ್ಲಾ ಬ್ರಾಹ್ಮಣರ ಕೈಯಲ್ಲಿವೇ ಇವೆ.ನೇಪಾಳ ಪ್ರಧಾನಿ ಪುಷ್ಪ ಕುಮಾರ್ ದಹಾಲ್ ಆಲಿಯಾಸ್ ಪ್ರಚಂಡ ಬ್ರಾಹ್ಮಣ ಸಮುದಾದವರು. ನೇಪಾಳ ಅಧ್ಯಕ್ಷ ರಾಮಚಂದ್ರ ಪೌಡೆಲ್, ಸೇನಾ ಮುಖ್ಯಸ್ಥ ಪ್ರಭುರಾಮ್ ಶರ್ಮಾ, ಪಾರ್ಲಿಮೆಂಟ್ ಸ್ಪೀಕರ್ ದೇವರಾಜ್ ಘುಮೀರೆ ಕೂಡ ಬ್ರಾಹ್ಮಣರೇ ಆಗಿದ್ದಾರೆ.
ನೇಪಾಳ ಪೊಲೀಸ್ ಚೀಫ್ ಬಸಂತ್ ಬಹುದ್ದೂರ್ ಕುನ್ವರ್ ಕೂಡ ಛೆತ್ರಿ ಕುಲಸ್ಥರು.
ಪ್ರಚಂಡ ಸಂಪುಟದ ಪ್ರಮುಖ ಖಾತೆಗಳೆಲ್ಲಾ ಇರುವುದು ಖಾಸ್ ಆರ್ಯರ ಬಳಿಯೇ. ನೇಪಾಳ ಸಂಸತ್ನಲ್ಲಿ ಸಂಪೂರ್ಣವಾಗಿ ಖಾಸ್ ಆರ್ಯರ ಪ್ರಾಬಲ್ಯವಿದೆ. ಸಂಸತ್ನ 164 ಸದಸ್ಯರನ್ನು ನೇರ ಚುನಾವಣೆ ಮೂಲಕ ಚುನಾಯಿಸಲಾಗುತ್ತದೆ.ಇವರಲ್ಲಿ 95 ಮಂದಿ ಖಾಸ್ ಆರ್ಯರು. ಅಂದರೆ, ಶೇಕಡಾ 57ರಷ್ಟು ಮಂದಿ ಬ್ರಾಹ್ಮಣರು ಮತ್ತು ಛೆತ್ರಿಗಳೇ ಇದ್ದಾರೆ.
ನೇಪಾಳದಲ್ಲಿ ಶೇಕಡಾ 4ರಷ್ಟು ಮುಸ್ಲಿಮರಿದ್ದಾರೆ.ಆದರೆ, ಚುನಾವಣೆಗಳ ಮೂಲಕ ಮುಸ್ಲಿಮರ್ಯಾರು ಸಂಸತ್ ಮೆಟ್ಟಿಲು ತುಳಿದಿಲ್ಲ. ಒಬ್ಬ ಶೇರ್ಪಾ ಕೂಡ ಚುನಾಯಿತರಾಗಿ ಸಂಸತ್ಗೆ ತೆರಳಿಲ್ಲ. ಶೇಕಡಾ 17ರಷ್ಟಿರುವ ದಲಿತರ ಪೈಕಿ ಸಂಸತ್ಗೆ ಆಯ್ಕೆಯಾಗಿರುವುದು ಒಬ್ಬರು ಮಾತ್ರ. ಬುಡಕಟ್ಟು ಸಮುದಾಯದಿಂದ ಆಯ್ಕೆಯಾದವರು 41 ಮಂದಿ(25%) ಇದ್ದಾರೆ. ನೇಪಾಳದಲ್ಲಿ ಇವರ ಒಟ್ಟು ಜನಸಂಖ್ಯೆ ಶೇಕಡಾ 35ರಷ್ಟು.
ADVERTISEMENT
ನೇಪಾಳದಲ್ಲಿ ಏಳು ರಾಜ್ಯಗಳಿವೆ. ಕೋಸಿ,ಮಧೇಸ್, ಭಾಗಮತಿ, ಗಂಡಕಿ, ಲುಂಬಿನಿ, ಕರ್ನಾಲಿ, ಸುದೂರ್ ಪಶ್ಚಿಮ್ ರಾಜ್ಯಗಳ ಪೈಕಿ ನಾಲ್ಕರಲ್ಲಿ ಮುಖ್ಯಮಂತ್ರಿ ಆಗಿರುವುದು ಬ್ರಾಹ್ಮಣ ಸಮುದಾಯವರೇ ಆಗಿದ್ದಾರೆ. ಉಳಿದ ಮೂರರಲ್ಲಿ ಖಸ್ ಆರ್ಯರ ರಾಜ್ಯಭಾರವಿದೆ.
ನೇಪಾಳದಲ್ಲಿ 239 ವರ್ಷಗಳ ಕಾಲ ಅರಸೊತ್ತಿಗೆ ಇತ್ತು. 2008ರಲ್ಲಿ ಇದು ಅಂತ್ಯವಾಗಿ ಪ್ರಜಾಫ್ರಭುತ್ವ ಅಸ್ತಿತ್ವಕ್ಕೆ ಬಂತು. ಆ ನಂತರದ 15 ವರ್ಷದಲ್ಲಿ 9 ಮಂದಿ ಪ್ರಧಾನಿಗಳಾದರು. ಇವರಲ್ಲಿ 8 ಮಂದಿ ಬ್ರಾಹ್ಮಣರು. ಒಬ್ಬರು ಛೆತ್ರಿ ಕುಲಸ್ಥರು.ನೇಪಾಳದಲ್ಲಿ ಪ್ರಜಾಪ್ರಭುತ್ವಕ್ಕೆ ಮುನ್ನ ಇದ್ದ ಪಂಚಾಯ್ತಿ ವ್ಯವಸ್ಥೆಯಲ್ಲೂ ಬ್ರಾಹ್ಮಣರೇ ಪ್ರಧಾನಮಂತ್ರಿಗಳಾಗಿದ್ದರು.
ನೇಪಾಲದ ಶೇಕಡಾ 71ರಷ್ಟು ಇತರೆ ಕುಲದವರ ಮೇಲೆ ಬ್ರಾಹ್ಮಣರು ಅಧಿಪತ್ಯ ಚಲಾಯಿಸುತ್ತಿದ್ದಾರೆ. ರಾಜಪ್ರಭುತ್ವ ಇದ್ದಾಗಲೂ, ಪ್ರಜಾಪ್ರಭುತ್ವ ಇರುವಾಗಲೂ ಬ್ರಾಹ್ಮಣದ ಅಧಿಪತ್ಯಕ್ಕೆ ಯಾವುದೇ ಕಂಟಕ ಎದುರಾಗಿಲ್ಲ.
ADVERTISEMENT