ಬೆಂಗಳೂರಿಗೆ ಬಂದಾಗೆಲ್ಲ ಪುನೀತ್​​ ಅಣ್ಣನ್ನ ಮೀಟ್ ಮಾಡ್ತಿದ್ದೆ – ವಿಜಯ್ ದೇವರಕೊಂಡ

Liger

ಬೆಂಗಳೂರಿಗೆ ಬಂದಾಗೆಲ್ಲ ಪುನೀತ್ ರಾಜ್​ಕುಮಾರ್ ಅಣ್ಣನನ್ನು ಭೇಟಿಯಾಗುತ್ತಿದ್ದೆ. ಅವರು ನನ್ನ ಸಿನೆಮಾಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು ಎಂದು ವಿಜಯ್ ದೇವರಕೊಂಡ ಪುನೀತ್ ರಾಜ್​ಕುಮಾರ್​​ರನ್ನು ಸ್ಮರಿಸಿದ್ದಾರೆ.

ತಮ್ಮ ನಟನೆಯ ಲೈಗರ್ ಸಿನೆಮಾದ ಪ್ರಚಾರಕ್ಕಾಗಿ ಸಿನೆಮಾ ತಂಡ ಬೆಂಗಳೂರಿಗೆ ಆಗಮಿಸಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ವಿಜಯ್ ದೇವರಕೊಂಡ ಪುನೀತ್ ರಾಜ್​ಕುಮಾರ್​​ ಅವರನ್ನು ಸ್ಮರಿಸಿದ್ದಾರೆ.

ಅಪ್ಪು ಜೊತೆಗಿನ ಒಡನಾಟದ ಬಗ್ಗೆ ಮೆಲುಕು ಹಾಕಿದ ವಿಜಯ್, ನಾನು ಬೆಂಗಳೂರಿಗೆ ಬಂದಾಗಲೆಲ್ಲ ಪುನೀತ್ ಅಣ್ಣನನ್ನು ಮೀಟ್ ಮಾಡಿ ಹೋಗುತ್ತಿದ್ದೆ. ಅವರು ನನ್ನ ಸಿನಿಮಾಗಳನ್ನು ನೋಡಿ ಫೋನ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಹಾಗೇ ಶಿವಣ್ಣ ಕೂಡ ನನ್ನ ಸಿನಿಮಾ ನೋಡಿ ಫೋನ್ ಮಾಡಿ ಮಾತನಾಡಿದ್ದು ಇದೆ ಅಂತಾ ರಾಜ್ ಕುಟುಂಬದೊಂದಿಗಿನ ಬಾಂಧವ್ಯವನ್ನು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ‘ಲೈಗರ್’ ಕ್ರೇಜ್ – ಅಭಿಮಾನಿಗಳ ಪ್ರೀತಿಗೆ ವಿಜಯ್ ದೇವರಕೊಂಡ ಕ್ಲೀನ್ ಬೋಲ್ಡ್

ನಟ ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನೆಮಾ ಇದೇ 25 ರಂದು ಪಂಚಭಾಷೆಗಳಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಸಿನೆಮಾ ಪ್ರಚಾರ ಕಾರ್ಯ ಆರಂಭಿಸಿದೆ.

ಲೈಗರ್ ಸಿನಿಮಾ ವಿಶ್ವದಾದ್ಯಂತ ಪಂಚ ಭಾಷೆಯಲ್ಲಿಯೂ ರಿಲೀಸಾಗ್ತಿದೆ. ಈ ಚಿತ್ರಕ್ಕೆ ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳಿದ್ದು ಧರ್ಮ ಪ್ರೊಡಕ್ಷನ್ ಹಾಗೂ ಪುರಿ ಕನೆಕ್ಟ್ಸ್ ನಡಿ, ಚಾರ್ಮಿ ಕೌರ್, ಪುರಿ ಜಗನ್ನಾಥ್, ಕರಣ್ ಜೋಹಾರ್ ಬಂಡವಾಳ ಹೂಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಟ್ರೈಲರ್ ಹಾಡು ಮತ್ತು ಟೀಸರ್ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ.

LEAVE A REPLY

Please enter your comment!
Please enter your name here