ಭಾರತದಲ್ಲಿ ಬುಲೆಟ್ ಟ್ರೈನ್ ಓಡೋದು ಯಾವಾಗ..? ಎಲ್ಲಿಗೆ ಬಂತು ಯೋಜನೆ..?

ಅದು ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ಹೊಸತು. ಅಂದರೆ, 9 ವರ್ಷದ ಹಿಂದಿನ ಮಾತು. ಅಹ್ಮದಾಬಾದ್​-ಮುಂಬೈ ನಡುವೆ ಬುಲೆಟ್ ಟ್ರೈನ್ ಓಡಿಸುವ ಪ್ರಸ್ತಾಪ ಮಾಡಿದ್ದರು.
2015ರಲ್ಲಿ ಜಪಾನ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದ 2022ಕ್ಕೆ ಬುಲೆಟ್ ಟ್ರೈನ್ ಓಡಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಆ ದಿನಗಳಲ್ಲಿ ಇದು ರಾಷ್ಟ್ರವ್ಯಾಪಿ ಸುದ್ದಿ ಮಾಡಿತ್ತು. ಟಿವಿ ಮಾಧ್ಯಮಗಳಂತೂ ಎಪಿಸೋಡ್ ಗಟ್ಟಲೇ ಬುಲೆಟ್​ ರೈಲ್ ಹಾಗಂತೆ.. ಹೀಗಂತೆ ಎಂದು ವರದಿ ಮಾಡಿದ್ದವು. ಭಾರತಕ್ಕೆ ಬುಲೆಟ್ ಟ್ರೈನ್ ಬಂದೇ ಬಿಟ್ಟಿತು ಎಂಬಂತೆ ಸುದ್ದಿ ಮಾಡಿದ್ದವು.
ಆದರೆ, ವಾಸ್ತವದಲ್ಲಿ ಭಾರತದಲ್ಲಿ ಬುಲೆಟ್ ಟ್ರೈನ್ ಯೋಜನೆ ಎಲ್ಲಿಗೆ ಬಂದಿದೆ.? ಯಾವಾಗ ಬುಲೆಟ್ ಟ್ರೈನ್ ಓಡಬಹುದು ಎನ್ನುವುದನ್ನು ನಿಮ್ಮ ಪ್ರತಿಕ್ಷಣ ನಿಮಗೆ ತಿಳಿಸುವ ಪ್ರಯತ್ನ ಮಾಡಿದೆ.
ಮನಮೋಹನ್ ಸಿಂಗ್ ಕನಸು.. ಪ್ರಧಾನಿ ನರೇಂದ್ರ ಮೋದಿ ಒಪ್ಪಂದ
ವಾಸ್ತವದಲ್ಲಿ 2013ರಲ್ಲಿಯೇ ಆಗಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು, ಮುಂಬೈ ಅಹ್ಮದಾಬಾದ್ ನಡುವೆ 508 ಕಿಲೋಮೀಟರ್ ಹೈಸ್ಪೀಡ್ ರೈಲ್ ಕಾರಿಡಾರ್ ನಿರ್ಮಿಸುವ ಸಂಬಂಧ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಲು ಜಪಾನ್ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ವರದಿ ಸಲ್ಲಿಸಲು 18 ತಿಂಗಳ ಗಡುವು ನೀಡಿದ್ದರು. ನಂತರದ ಕಾಲಘಟ್ಟದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದರು.
2014ರಲ್ಲಿ ಬುಲೆಟ್ ರೈಲು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಒಪ್ಪಿಗೆ ಸೂಚಿಸಿದ್ದರು. 2015ರಲ್ಲಿ ಜಪಾನ್ ಜೊತೆಗೆ ಒಪ್ಪಂದ ಮಾಡಿಕೊಂಡರು. ಮುಂಬೈ-ಅಹ್ಮದಾಬಾದ್ ಹೈ ಸ್ಪೀಡ್ ರೈಲು ಯೋಜನೆಯನ್ನು 2022ರ ಆಗಸ್ಟ್ 15ರ ಹೊತ್ತಿಗೆ ಪೂರ್ಣಗೊಳಿಸುವ ಪ್ರಯತ್ನ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಆದರೆ, 2013ರ ಹೊತ್ತಿಗೆ ಪೂರ್ಣಗೊಳ್ಳಲಿದೆ 2017ರಲ್ಲಿ ನೀತಿ ಆಯೋಗ ತಿಳಿಸಿತ್ತು.
2020ರಲ್ಲಿ ಈಸ್ಟ್ ಜಪಾನ್ ರೈಲ್ವೇ ಕಂಪನಿ ಭಾರತದಲ್ಲಿ ಹಳಿ ಏರಲಿರುವ ಬುಲೆಟ್ ಟ್ರೈನ್ ಇದೆ ನೋಡಿ ಎಂದು ಒಂದು ಫೋಟೋ ರಿಲೀಸ್ ಮಾಡಿತು.ಇ-5 ಸೀರೀಸ್​ನ ಷಿಂಕನ್​ಸೆನ್ ಬುಲೆಟ್ ರೈಲು ಭಾರತಕ್ಕೆ ಬರಲಿದೆ ಎಂದು ತಿಳಿಸಿತು.
2022ಕ್ಕೆ ಯೋಜನೆ ಪೂರ್ಣ ಎಂದು ಮೋದಿ ತಿಳಿಸಿದ್ದರು.. ಆದರೆ.
2022ರ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಜಪಾನ್ ಪ್ರವಾಸ ತೆರಳಿದ್ದ ಸಂದರ್ಭದಲ್ಲಿ ಈ ಯೋಜನೆಗೆ ಸಂಬಂಧಿಸಿ ಶೇಕಡಾ 17ರಷ್ಟು ಪ್ರಗತಿಯಾಗಿದೆ ಎಂದು ಆರ್​ಟಿಐ ದಾಖಲೆಗಳನ್ನು ಉಲ್ಲೇಖಿಸಿ ಆಜ್​ತಕ್ ವರದಿ ಮಾಡಿತು.
ಆದರೆ, ನಿಗದಿಯಂತೆ ಏನು ನಡೆದಿಲ್ಲ ದೇಶಕ್ಕೆ ಬುಲೆಟ್​ ರೈಲು ಬಂದಿಲ್ಲ. ಇನ್ನೂ ಕನಿಷ್ಠ ಐದು ವರ್ಷ ಭಾರತಕ್ಕೆ ಬುಲೆಟ್ ರೈಲು ಬರುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಸದ್ಯದ ಮಾಹಿತಿ ಪ್ರಕಾರ ಈವರೆಗೂ ಯೋಜನೆಯ ಶೇಕಡಾ 30ರಷ್ಟು ಪ್ರಗತಿ ಮಾತ್ರ ಆಗಿದೆ.
ಐದು ವರ್ಷಗಳ ಹಿಂದೆ ಶುರುವಾದ ಯೋಜನೆಯ ಕಾಮಗಾರಿ ಕಳೆದ ಆರ್ಥಿಕ ವರ್ಷದ ಕೊನೆಯ ಹೊತ್ತಿಗೆ ಶೇಕಡಾ 30.15ರಷ್ಟು ಮುಗಿದಿದೆ ಎಂದು ರೈಲ್ವೇ ಇಲಾಖೆ ವರದಿಗಳು ಹೇಳುತ್ತಿವೆ.
ಬುಲೆಟ್ ರೈಲಿನ ಮೊದಲ ಟ್ರಯಲ್ ರನ್ ಅನ್ನು 63 ಕಿಲೋಮೀಟರ್ ಉದ್ದದ ಕಾರಿಡಾರ್ ಸೂರತ್-ಬಿಲಿಮೋರಾ ನಡುವೆ 2026ರ ಆಗಸ್ಟ್​ನಲ್ಲಿ ನಿರ್ವಹಿಸಲು ರೈಲ್ವೇ ಇಲಾಖೆ ಪ್ಲಾನ್ ಮಾಡಿಕೊಂಡಿದೆ.
ಬುಲೆಟ್ ರೈಲು ಯೋಜನೆಯನ್ನು ಬಿಳಿಯಾನೆ ಎಂದಿದ್ದರು ಉದ್ಧವ್ ಠಾಕ್ರೆ
ಲಭ್ಯ ಮಾಹಿತಿಯ ಪ್ರಕಾರ ಮಹಾರಾಷ್ಟ್ರದಲ್ಲಿ ಭೂಸ್ವಾಧೀನ ಪ್ರಕ್ರಿಯೆಯೇ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ.
2020ರ ಫೆಬ್ರವರಿಯಯಲ್ಲಿ ಸಾಮ್ನಾಗೆ ಸಂದರ್ಶನ ನೀಡಿದ್ದ ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಈ ಯೋಜನೆಯನ್ನು ಬಿಳಿಯಾನೆಗೆ ಹೋಲಿಸಿದ್ದರು.
2022ರ ಫೆಬ್ರವರಿ 18ರಂದು ವರ್ಚೂವಲ್ ಆಗಿ ಮುಂಬೈ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಬುಲೆಟ್ ಟ್ರೈನ್ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವುದೇ ನಮ್ಮ ಆದ್ಯತೆ ಎಂದು ತಿಳಿಸಿದ್ದರು.
ಆದರೆ, ಆದಷ್ಟು ಬೇಗ ಎಂದರೇ ಎಷ್ಟು ಎನ್ನುವುದು ಈಗಿನ ಪ್ರಶ್ನೆ.
ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೇ ಈ ಯೋಜನೆ ಯಾವಾಗ  ಪೂರ್ಣಗೊಳ್ಳುತ್ತದೆ.. ಯಾವಾಗ ಬುಲೆಟ್ ಟ್ರೈನ್ ಭಾರತದಲ್ಲಿ ಓಡಲಿದೆ ಎಂದು ಖಚಿತವಾಗಿ ಹೇಳಲಾಗದ ಪರಿಸ್ಥಿತಿ ಇದೆ. 
ಬುಲೆಟ್ ರೈಲು ವಿಶೇಷತೆ
ಜಪಾನ್​ ಬುಲೆಟ್ ರೈಲು ವೇಗ ಗಂಟೆಗೆ 320 ಕಿಲೋಮೀಟರ್​ವರೆಗೂ ಇದೆ.
ಭಾರತದಲ್ಲಿ ಬುಲೆಟ್ ರೈಲು ಯೋಜನೆ ಮುಂಬೈ-ಸೂರತ್​-ಅಹ್ಮದಾಬಾದ್​ ನಡುವೆ ಸಂಪರ್ಕ ಕಲ್ಪಿಸುತ್ತದೆ.
ಈ ಯೋಜನೆಯಲ್ಲಿ 12 ಸ್ಟೇಷನ್​ಗಳಿವೆ. ಗುಜರಾತ್​ಗೆ 8 ಸ್ಟೇಷನ್, ಮಹಾರಾಷ್ಟ್ರ ವ್ಯಾಪ್ತಿಗೆ 4 ಸ್ಟೇಷನ್ ಬರಲಿವೆ.
ಕೇವಲ 21 ಕಿಲೋಮೀಟರ್ ಟ್ರ್ಯಾಕ್ ಮಾತ್ರ ಭೂಮಿ ಮೇಲೆ ಇರುತ್ತದೆ. ಉಳಿದ ಟ್ರ್ಯಾಕ್ ಅನ್ನು ಎಲಿವೇಟ್ ಮಾಡಲಾಗುತ್ತದೆ.
ಬುಲೆಟ್ ರೈಲು 508 ಕಿಲೋಮೀಟರ್ ದೂರವನ್ನು 8 ಗಂಟೆಗಳಿಂದ 3 ಗಂಟೆಗೆ ಇಳಿಸಲಿದೆ.
ಡಬಲ್ ಆಗಲಿದೆ ಯೋಜನೆ ವೆಚ್ಚ
ಈ ಯೋಜನೆಗೆ ಜಪಾನ್ 50 ವರ್ಷಗಳ ಮಟ್ಟಿಗೆ 0.01ರ ಬಡ್ಡಿ ದರದಲ್ಲಿ 88,000 ಕೋಟಿ ಹಣವನ್ನು ಭಾರತಕ್ಕೆ ಸಾಲ ನೀಡುತ್ತಿದೆ.
ಬುಲೆಟ್ ರೈಲಿನ ಬಗ್ಗೆ ಪ್ರಧಾನಿ ಮೋದಿ ಮೊದಲ ಬಾರಿ ಪ್ರಸ್ತಾಪಿಸಿದಾಗ ಈ ಯೋಜನೆಯ ವೆಚ್ಚ 98,000 ಕೋಟಿ ಎಂದು ಅಂದಾಜಿಸಲಾಗಿತ್ತು.
ಅದು 2020ರ ಹೊತ್ತಿಗೆ 1,10,000 ಕೋಟಿಗೇರಿತು. ಇದೀಗ ಇನ್ನಷ್ಟು ಹೆಚ್ಚಿರುತ್ತದೆ.
ಈ ಯೋಜನೆ 2029-30ಕ್ಕೆ ಪೂರ್ಣಗೊಳ್ಳಲಿದೆ ಎಂದು ಭಾವಿಸಿದರೇ, ಈ ಯೋಜನೆಯ ವೆಚ್ಚ 1,60,000 -1,70,000 ಮಧ್ಯೆ ಇರಲಿದೆ. ಅಂದರೆ, ಮೂಲ ಅಂದಾಜು ವೆಚ್ಚಕ್ಕೆ ಡಬಲ್. ಇದು ಭಾರತ