ಗುಜರಾತ್ನ ಉಪ್ಪು ಪ್ಯಾಕಿಂಗ್ ಕಂಪೆನಿಯ ಗೋಡೆ ಕುಸಿದು 12 ಜನ ಸಾವನ್ನಪ್ಪಿದ್ದು, 30 ಜನ ಸಿಲುಕಿರುವುದಾಗಿ ವರದಿಯಾಗಿದೆ.
ಗುಜರಾತ್ನ ಮೋರ್ಬಿ ಜಿಲ್ಲೆಯಲ್ಲಿ ಇಂದು ಬುಧವಾರ ಸಾಗರ್ ಉಪ್ಪು ಪ್ಯಾಕಿಂಗ್ ಫ್ಯಾಕ್ಟರಿಯಲ್ಲಿ ಈ ಅವಘಡ ಸಂಭವಿಸಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಹಲ್ವಾಡಿ ಇಂಡಸ್ಟ್ರಿಯಲ್ ಏರಿಯಾದ ಕಾರ್ಮಿಕ ಇಲಾಖೆ ಸಚಿವರು ಹಾಗೂ ಸ್ಥಳೀಯ ಶಾಸಕರಾದ ಬ್ರಿಜೇಶ್ ಮರ್ಜಾ ಅವರು ಹೇಳಿಕೆ ನೀಡಿದ್ದು, ಸಾಗರ್ ಉಪ್ಪು ಫ್ಯಾಕ್ಟರಿಯಲ್ಲಿ ಈ ದುರ್ಘಟನೆ ನಡೆದಿದೆ.
ಈ ಅವಘಡದಲ್ಲಿ 12 ಜನ ಸಾವನ್ನಪ್ಪಿದ್ದು, 30 ಕ್ಕಿಂತಲೂ ಹೆಚ್ಚು ಜನ ಸಿಲುಕಿರುವ ಬಗ್ಗೆ ತಿಳಿದುಬಂದಿದೆ. ಗೋಡೆಯ ಕೆಳಗೆ ಸಿಲುಕಿದವರ ರಕ್ಷಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.