ಹೊಸ ರೆಸ್ಟೋರೆಂಟ್ ಆರಂಭಿಸಲಿದ್ದಾರೆ ಕೊಹ್ಲಿ – ಎಲ್ಲಿ ಗೊತ್ತಾ..?

Virat Kohli Anushka Sharma

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ದಂಪತಿ ಮುಂಬೈನಲ್ಲಿ ಹೊಸ ರೆಸ್ಟೋರೆಂಟ್ ತೆರೆಯಲಿದ್ದಾರೆ.

ಖ್ಯಾತ ಹಿಂದಿ ಗಾಯಕ ಕಿಶೋರ್ ಕುಮಾರ್ ಅವರ ಕುಟುಂಬಕ್ಕೆ ಸೇರಿದ ಗೌರಿ ಕುಂಜ್ ಬಂಗಲೆಯ ಭಾಗವನ್ನು ಐದು ವರ್ಷದ ಮಟ್ಟಿಗೆ ಕೊಹ್ಲಿ ದಂಪತಿ ಲೀಸ್‌ಗೆ ಪಡೆದಿದ್ದಾರೆ.

ಮುಂಬೈನ ಜುಹು ಬೀಚ್‌ನಲ್ಲಿ ಕೊಹ್ಲಿ ಅವರ ಹೊಸ ರೆಸ್ಟೋರೆಂಟ್ ಆರಂಭ ಆಗಲಿದೆ. ಈಗಾಗಲೇ ತವರು ನಗರಿ ದೆಹಲಿ, ಕೋಲ್ಕತ್ತಾ, ಪುಣೆಯಲ್ಲೂ ಕೊಹ್ಲಿ ಅವರು ರೆಸ್ಟೊçÃ-ಬಾರ್ ಉದ್ಯಮ ಆರಂಭಿಸಿದ್ದಾರೆ.

ಕೊಹ್ಲಿ ಮತ್ತು ಅನುಷ್ಕಾ ದಂಪತಿ 18ಕಮ್ಯೂನ್ ಎಂಬ ಕಂಪನಿ ಮೂಲಕ ಉದ್ಯಮಕ್ಕಿಳಿದಿದ್ದಾರೆ. ವ್ರಾಗನ್ ಎಂಬ ಜವಳಿ ಕಂಪನಿಯಲ್ಲೂ ಕೊಹ್ಲಿ ದಂಪತಿ ಹೂಡಿಕೆ ಮಾಡಿದ್ದಾರೆ. 18 ಕೊಹ್ಲಿ ಅವರ ಜೆರ್ಸಿ ಸಂಖ್ಯೆ. ಜೆರ್ಸಿ ಸಂಖ್ಯೆಯನ್ನಿಟ್ಟೇ ತಮ್ಮ ಕಂಪನಿ ನಡೆಸುತ್ತಿದ್ದಾರೆ ಕೊಹ್ಲಿ.

LEAVE A REPLY

Please enter your comment!
Please enter your name here