Virat Kohli: ವೀರೇಂದ್ರ ಸೆಹ್ವಾಗ್​ ದಾಖಲೆ ದಾಟಿದ ವಿರಾಟ್​ ಕೊಹ್ಲಿ

ಟೆಸ್ಟ್​ ಕ್ರಿಕೆಟ್​ನಲ್ಲಿ ವಿರಾಟ್​ ಕೊಹ್ಲಿ ಅವರು ರನ್​ ಗಳಿಕೆಯಲ್ಲಿ ವೀರೇಂದ್ರ ಸೆಹ್ವಾಗ್​ ಅವರನ್ನು ಹಿಂದಿಕ್ಕಿದ್ದಾರೆ.

ಟೆಸ್ಟ್​ನಲ್ಲಿ ಸೆಹ್ವಾಗ್​ ಅವರು 8,503 ರನ್​ ಗಳಿಸಿದ್ದರು. ಆದರೆ ವಿಂಡೀಸ್​ ವಿರುದ್ಧದ ಮೊದಲ ಟೆಸ್ಟ್​ನಲ್ಲಿ 36 ರನ್​ ಗಳಿಸುವ ಮೂಲಕ 8,515 ರನ್​ ಗಳಿಸಿದ್ದಾರೆ.

ಅತೀ ಹೆಚ್ಚು ಟೆಸ್ಟ್​ ರನ್​ ಗಳಿಸಿದ ಭಾರತದ ಆಟಗಾರರು:

ಸಚಿನ್ ತೆಂಡೂಲ್ಕರ್​ ಅವರು 200 ಟೆಸ್ಟ್​ ಪಂದ್ಯಗಳಲ್ಲಿ 15,921 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.

ರಾಹುಲ್​ ದ್ರಾವಿಡ್​ ಅವರು 153 ಟೆಸ್ಟ್​ಗಳಲ್ಲಿ 13,265 ರನ್​ ಗಳಿಸಿದ ಎರಡನೇ ಸ್ಥಾನದಲ್ಲಿದ್ದಾರೆ.

ಸುನಿಲ್​ ಗವಾಸ್ಕರ್​ ಅವರು 125 ಟೆಸ್ಟ್​ಗಳಲ್ಲಿ 10,122 ರನ್​ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ವಿವಿಎಸ್​ ಲಕ್ಷ್ಮಣ್​ ಅವರು 134 ಪಂದ್ಯಗಳಿಂದ 8,781 ರನ್​ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ವಿರಾಟ್​ ಕೊಹ್ಲಿ ಅವರು 110 ಪಂದ್ಯಗಳಿಂದ 8,515 ರನ್​ ಗಳಿಸಿ ಐದನೇ ಸ್ಥಾನಕ್ಕೆ ಜಿಗಿದಿದ್ದಾರೆ.

ವೀರೇಂದ್ರ ಸೆಹ್ವಾಗ್​ ಅವರು 103 ಪಂದ್ಯಗಳಲ್ಲಿ 8,503 ರನ್​ ಗಳಿಸಿ ಆರನೇ ಸ್ಥಾನದಲ್ಲಿದ್ದಾರೆ.

LEAVE A REPLY

Please enter your comment!
Please enter your name here