ಆಷಾಢ ಮಾಸದ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ತೆರಳಲು ನೀಡುತ್ತಿದ್ದ ವಾಹನ ಪಾಸ್ ವ್ಯವಸ್ಥೆ ರದ್ದು ಮಾಡಲಾಗಿದೆ.
ಪಾಸ್ ರದ್ದು ಮಾಡಿ, ಮೈಸೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ವಿಐಪಿ ಪಾಸ್ನಿಂದಾಗಿ ಚಾಮುಂಡಿ ಬೆಟ್ಟದಲ್ಲಿ ಖಾಸಗಿ ವಾಹನ ದರ್ಬಾರ್ ಹೆಚ್ಚಾಗುತ್ತಿತ್ತು.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನೀಡಲಾಗುತ್ತಿದ್ದ ವಿಐಪಿ ಪಾಸ್ನಿಂದಾಗಿ ಖಾಸಗಿ ವಾಹನ ದಟ್ಟಣೆ ಹೆಚ್ಚಳ ಹಿನ್ನಲೆಯಲ್ಲಿ ಪಾಸ್ ರದ್ದು ಮಾಡಲಾಗಿದೆ.