ವೀಸಾ ನಿಯಮ ಉಲ್ಲಂಘಿಸಿ ಧಾರ್ಮಿಕ ಉಪದೇಶ : 17 ಬಾಂಗ್ಲಾ ದೇಶಿಯರ ಬಂಧನ

ವೀಸಾ ನಿಯಮ ಉಲ್ಲಂಘನೆ (Violation of visa rules) ಮಾಡಿದ ಆರೋಪದ ಮೇರೆಗೆ 17 ಜನ ಬಾಂಗ್ಲಾ ದೇಶದ ಪ್ರಜೆಗಳು ಹಾಗೂ ಧಾರ್ಮಿಕ ಉಪದೇಶಕರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂನ ಬಿಶ್ವನಾಥ್ ಜಿಲ್ಲೆಯ ಗಿಂಗಿರಿ ಎಂಬಲ್ಲಿ 17 ಜನರನ್ನು ಬಂಧಿಸಲಾಗಿದೆ.

ಸೈಯದ್ ಅಶ್ರಫುಲ್ ಆಲಂ ಮತ್ತು ಸಹಚರರನ್ನು ಬಂಧಿಸಿದ್ದೇವೆ. ಈ ತಂಡ ಅಸ್ಸಾಂಗೆ ಮುನ್ನ ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿತ್ತು. ಇವರು ಎಲ್ಲಾ ಕಡೆಯೂ ಧಾರ್ಮಿಕ ಉಪದೇಶ ನೀಡುವ ಮೂಲಕ ಪ್ರವಾಸಿ ವೀಸಾದ ನಿಯಮ ಉಲ್ಲಂಘನೆ (Violation of visa rules) ಮಾಡಿದ್ದಾರೆ. ಹಲವು ಬಾರಿ ಎಚ್ಚರಿಕೆ ನೀಡಿದರು ಕ್ಯಾರೆ ಎನ್ನಲಿಲ್ಲ. ಆದ್ದರಿಂದ ಇಡೀ ತಂಡವನ್ನು ಬಂಧಿಸಿದ್ದೇವೆ ಎಂದು ಅಸ್ಸಾಂ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಅಸ್ಸಾಂನ ಬಾಗ್ಮರಿ ಪ್ರದೇಶ ಪ್ರವಾಸಿ ತಾಣವಲ್ಲ. ಆದ್ದರಿಂದ ಪ್ರವಾಸಿ ವೀಸಾ ಪಡೆದು ಬಾಗ್ಮರಿ ಪ್ರದೇಶಕ್ಕೆ ಯಾಕೆ ಬಂದಿದ್ದಾರೆ ಎಂದು ತಿಳಿಯಲು ಮುಂದಾದೆವು. ಆಗ ಇಡೀ ತಂಡ ಧಾರ್ಮಿಕ ಉಪದೇಶ ಮಾಡುತ್ತಿತ್ತು. ಇವರ ಮುಸ್ಲಿಂ ಸಮುದಾಯದ ಒಂದು ನಿರ್ಧಿಷ್ಠ ಪಂಗಡದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ : ಅಸ್ಸಾಂ: ಅಲ್ ಖೈದಾ ಉಗ್ರ ಸಂಘಟನೆಯೊಂದಿಗೆ ನಂಟು ಶಂಕೆ, ಇಬ್ಬರ ಬಂಧನ

LEAVE A REPLY

Please enter your comment!
Please enter your name here