ADVERTISEMENT
ADVERTISEMENT
ಲೈಂಗಿಕ ಕಿರಕುಳ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಬ್ರಿಜ್ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಕುಸ್ತಿಪಟುಗಳಲ್ಲಿ ವಿನೇಶ್ ಪೋಗಟ್ ಕೂಡ ಒಬ್ಬರು. ಅಂತಾರಾಷ್ಟ್ರೀಯ ಮಾಧ್ಯಮದ ಜೊತೆ ಮಾತನಾಡಿರುವ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ನಂತರ ನಾನು ಪ್ರಧಾನಿಯವರನ್ನು ಭೇಟಿ ಮಾಡಿದ್ದೆ. ಕೆಲ ವಿಷಯಗಳನ್ನು ಹಂಚಿಕೊಂಡಿದ್ದೆ. ಆ ಸಾರ್ ನನಗೆ ತೊಂದರೆ ಮಾಡುತ್ತಿದ್ದಾರೆ ಎಂದಿದೆ. ಆದರೆ, ಲೈಂಗಿಕ ಕಿರುಕುಳದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಓಪನ್ ಆಗಿ ಹೇಳಿರಲಿಲ್ಲ.
ನಾನು ಪ್ರಧಾನಿಯವರಿಗೆ ದೂರು ನೀಡಿದ ನಂತರ ಬ್ರಿಜ್ಭೂಷಣ್ಗೆ ಪ್ರಧಾನಿ ಕ್ಲಾಸ್ ತೆಗೆದುಕೊಂಡಿರುತ್ತಾರೆ. ಇದಾದ ನಂತರ ನನಗೆ ಬ್ರಿಜ್ಭೂಷಣ್ ಕಡೆಯವರು ನನಗೆ ಇನ್ನಿಲ್ಲದ ಕಿರುಕುಳ ಕೊಡೋಕೆ ಶುರು ಮಾಡಿದರು. ಬೆದರಿಕೆ ಹಾಕಲು ಶುರು ಮಾಡಿದರು.
ಪ್ರಧಾನಿಗೆ ಹೇಳ್ತೀಯಾ? ಎಷ್ಟು ಧೈರ್ಯ ನಿಂಗೆ? ದೊಡ್ಡ ಪ್ಲೇಯರ್ ಆಗೋಗಿದೀನಿ ಅಂದ್ಕೊಂಡಿದ್ದೀಯಾ? ನಿನಗೆ ಸರಿಯಾಗಿ ಪಾಠ ಕಲಿಸ್ತೀವಿ ಎಂದು ಬೆದರಿಕೆ ಹಾಕಿದರು.
ಇದಾದ 24 ಗಂಟೆಯಲ್ಲಿ ನಮಗೆ ಕ್ರೀಡಾಮಂತ್ರಿಯಿಂದ ಫೋನ್ ಬಂತು. ಬನ್ನಿ ಮೀಟ್ ಮಾಡಿ ಅಂದ್ರು.
ಈ ಸಮಸ್ಯೆ ಏನೋ ನೋಡಿ ಎಂದು ಪ್ರಧಾನಿಯವರು ಕ್ರೀಡಾಮಂತ್ರಿಗೆ ಹೇಳಿರ್ತಾರೆ. ನಾನು ಕ್ರೀಡಾಮಂತ್ರಿಯನ್ನು ಭೇಟಿ ಮಾಡಿದೆ. ಎಲ್ಲಾ ವಿಷಯಗಳನ್ನು ವಿವರವಾಗಿ ವಿವರಿಸಿದೆ. ಪ್ರಧಾನಿಗೆ ಹೇಳದ ವಿಚಾರಗಳನ್ನು ಕೂಡ ಕ್ರೀಡಾಮಂತ್ರಿ ಗಮನಕ್ಕೆ ತಂದೆ.
ಆದರೆ, ನಾವು ಹೇಳಿದ ವಿಚಾರಗಳೆಲ್ಲಾ ಕ್ರೀಡಾ ಮಂತ್ರಿಯಿಂದಲೇ ಹೊರಗೆ ಬಂದವು. ಈ ಸಂದರ್ಭದಲ್ಲಿ ನಾವು ಶಾಕ್ಗೆ ಗುರಿಯಾದವು. ಯಾರನ್ನು ನಂಬಬಾರದು ಎಂದು ಆಗ ಭಾವಿಸಿದೆ