ಅವಧೂತ ವಿನಯ್ ಗುರೂಜಿಯ(Vinay Guruji)ವರು ಟ್ರೋಲ್ ಪೇಜ್ಗಳ ವಿರುದ್ಧ ಸಿಡಿದೆದ್ದಿದ್ದು, ಹಲವು ಟ್ರೋಜ್ ಪೇಜ್ಗಳ ವಿರುದ್ಧ ದೂರು ದಾಖಲು ಮಾಡಿದ್ದಾರೆ.
ವಿನಯ್ ಗುರೂಜಿ(Vinay Guruji)ಯವರು ತಮ್ಮ ಪಿಆರ್ಒ ಮೂಲಕ ಹಲವು ಟ್ರೋಲ್ ಪೇಜ್ಗಳ ಹಾಗೂ ಯೂಟ್ಯೂಬ್ ಚಾನೆಲ್ಗಳ ಮೇಲೆ ಪ್ರಕರಣ ದಅಖಲು ಮಾಡಿದ್ದಾರೆ.
ತಲೆಯ ಮೇಲೆ ಕಾಲಿಡುವ ದೃಶ್ಯ ಪೋಸ್ಟ್ ಮಾಡಿ ಅದರಲ್ಲಿ ಕೆಟ್ಟದಾಗಿ ಕಮೆಂಟ್ ಹಾಕಿದ್ದಾರೆ. ಹಾಗೂ ಆ ವಿಡಿಯೋ ಹಂಚಿಕೊಂಡು ತಮ್ಮನ್ನು ಅವಹೇಳನ ಮಾಡಲಾಗಿದೆ ಎಂದು ವಿನಯ್ ಗುರೂಜಿ ಈ ದೂರನ್ನು ನೀಡಿದ್ದಾರೆ. ಇದನ್ನೂ ಓದಿ : ನಾಳೆಯಿಂದ ರಾಜ್ಯದಲ್ಲಿ ಮಳೆಯ ಆರ್ಭಟ : ಮುನ್ಸೂಚನೆ – Pratikshana News
ಕೆಪಿಸಿಸಿ ಆನೇಕಲ್ ವಿಭಾಗ ಸೋಷಿಯಲ್ ಮೀಡಿಯಾ ವಿಂಗ್ ಸೇರಿ 22 ಟ್ರೋಲ್ ಪೇಜ್ ಗಳ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ದೂರು ನೀಡಿದ್ಧಾರೆ.
ಟ್ರೋಲ್ನಲ್ಲಿ ರಾತ್ರಿ ಕುಡಿದ ಹೆಂಡದ ಅಮಲಿನಲ್ಲಿ ತಲೆಯ ಮೇಲೆ ಕಾಲಿಡುತ್ತಿರುವ ಗುರೂಜಿ, ನಶೆಯಲ್ಲಿ ನಿಲ್ಲೋಕೂ ಆಗುತ್ತಿಲ್ಲ, ಗಾಂಜಾ ಸಿಗರೇಟು ಸೇದ್ತಾನೆ, ಎಂದೂ ಒಪ್ಪಿಕೊಳ್ಳಬೇಕಾಗುತ್ತೆ .. ಗುರೂಜಿ ಎಂದು ಹೇಳಿಕೊಳ್ಳುವ ಎಲ್ಲಾರೂ ಸ್ಟಾರ್ ಹೊಟೇಲ್ ನಲ್ಲಿ ನಡೆಸುವ ರಂಗಿನಾಟ ಇದೆ ಎಂದು ಟ್ರೋಲ್ ಪೇಜ್ ಗಳು ಕಮೆಂಟ್ ಮಾಡಿದೆ. ಇಂತಹ ಟ್ರೋಲ್ ಗಳಿಂದ ಸ್ವಾಮೀಜಿಯವರ ತೇಜೋವಧೆ ಆಗಿದೆ. ಅವರ ಲಕ್ಷಾಂತರ ಭಕ್ತರ ಮನಸ್ಸಿಗೆ ಘಾಸಿಯುಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಸಮಾಜದಲ್ಲಿ ಅಶಾಂತಿಯನ್ನ ಸೃಷ್ಟಿಸಿ ಸಮಾಜದ ಸ್ವಾಸ್ಥ್ಯ ಕದಡುವ ಕೆಲಸ ಮಾಡುತ್ತಿರುವ ಟ್ರೋಲಿಗರ ಮೇಲೆ ಕ್ರಮ ಕೈಗೊಳ್ಳಲು ವಿನಯ್ ಗುರೂಜಿ(Vinay Guruji) ಮನವಿ ಮಾಡಿದ್ಧಾರೆ.
ಈ ಹಿನ್ನೆಲೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.