`ವಿಧಾನಸಭೆಗೆ ವಿಜಯೇಂದ್ರ ಸ್ಪರ್ಧೆ, ಎಲ್ಲೇ ನಿಂತ್ರೂ ಗೆಲ್ತಾರೆ, ವಿಜಯೇಂದ್ರಗೆ ಒಳ್ಳೆ ಭವಿಷ್ಯ ಇದೆ’ – ಪುತ್ರನ ಬಗ್ಗೆ ಯಡಿಯೂರಪ್ಪ ಮಾತು

`ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯೇಂದ್ರ ಅವರು ಸ್ಪರ್ಧೆ ಮಾಡುತ್ತಾರೆ ಮತ್ತು ಎಲ್ಲೇ ನಿಂತರೂ ವಿಜಯೇಂದ್ರ ಗೆದ್ದೇ ಗೆಲ್ಲುತ್ತಾರೆ’ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದಾರೆ.

ಈ ಮೂಲಕ ವಿಧಾನಪರಿಷತ್ ಟಿಕೆಟ್ ಕೈ ತಪ್ಪಿದ ತಮ್ಮ ಮಗ ವಿಧಾನಸಭೆಗೆ ಸ್ಪರ್ಧಿಸುವ ಬಗ್ಗೆ ಹೈಕಮಾಂಡ್‌ಗೂ ಮೊದಲೇ ಯಡಿಯೂರಪ್ಪ ದೃಢಪಡಿಸಿದ್ದಾರೆ.

`ಒಂದೇ ಕುಟುಂಬದವರಿಗೆ ಟಿಕೆಟ್ ಕೊಡಬಾರದು ಎಂದು ಪಕ್ಷ ತೀರ್ಮಾನ ತೆಗೆದುಕೊಂಡಿದೆ’ ಎಂದು ವಿಜಯೇಂದ್ರಗೆ ಪರಿಷತ್ ಟಿಕೆಟ್ ಕೈತಪ್ಪಿದ್ದರ ಬಗ್ಗೆ ಯಡಿಯೂರಪ್ಪ ಪ್ರತಿಕ್ರಿಯಿಸಿದರು.

ವಿಜಯಪುರದಲ್ಲಿ ಮಾತಾಡಿದ ಯಡಿಯೂರಪ್ಪ,

`ಮುಂದೆ ವಿಜಯೇಂದ್ರಗೆ ಒಳ್ಳೆ ಭವಿಷ್ಯ ಇದೆ. ಒಳ್ಳೆಯ ಅವಕಾಶ ಸಿಗಲಿದೆ. ವಿಜಯೇಂದ್ರ ಯುವಕ ಇದ್ದಾನೆ. ಓಡಾಡಿ ಕೆಲಸ ಮಾಡ್ತಿದ್ದಾನೆ. ಯುವಕರಲ್ಲಿ ವಿಜಯೇಂದ್ರ ಬಗ್ಗೆ ದೊಡ್ಡ ವಿಶ್ವಾಸವಿದೆ’ ಎಂದು ಹೇಳುವ ಮೂಲಕ ತಮ್ಮ ಪುತ್ರನನ್ನ ಕಡೆಗಣಿಸದಿರುವಂತೆ ಪರೋಕ್ಷವಾಗಿ ಹೈಕಮಾಂಡ್‌ಗೆ ಸಂದೇಶ ರವಾನಿಸಿದ್ದಾರೆ ಯಡಿಯೂರಪ್ಪ.

`ಆರೋಗ್ಯ ಚೆನ್ನಾಗಿದ್ರೆ 10 ವರ್ಷಗಳ ಕಾಲ ಓಡಾಡುತ್ತೇನೆ. ರಾಜ್ಯದೆಲ್ಲೆಡೆ ಓಡಾಡಿ ಪಕ್ಷ ಕಟ್ಟುತ್ತೇನೆ. ಮುಂದಿನ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಾಗುತ್ತದೆ’ ಎಂದು ಯಡಿಯೂರಪ್ಪ ಹೇಳಿದ್ದಾರೆ.

 

LEAVE A REPLY

Please enter your comment!
Please enter your name here